HEALTH TIPS

ಈ ವರ್ಷದ ರಾಜ್ಯ ಮಟ್ಟದ ಓಣಂ ಆಚರಣೆಗಳು ಸೆಪ್ಟೆಂಬರ್ ೧೩ ರಿಂದ

                    ತಿರುವನಂತಪುರ: ಈ ವರ್ಷದ ರಾಜ್ಯಮಟ್ಟದ ಓಣಂ ಆಚರಣೆಗಳು ಸೆಪ್ಟೆಂಬರ್ ೧೩ ರಿಂದ ತಿರುವನಂತಪುರದಲ್ಲಿ ಆರಂಭವಾಗಲಿವೆ.

                      ೧೯ರಂದು ಮೆರವಣಿಗೆಯೊಂದಿಗೆ ಸಪ್ತಾಹದ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಇದಕ್ಕೆ ಸಂಬAಧಿಸಿದ ವಿಷಯಗಳನ್ನು ನಿರ್ಧರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

                     ಓಣಂ ಮೇಳಗಳು, ಓಣಂ ಮಾರುಕಟ್ಟೆಗಳು, ತರಕಾರಿ ಕೌಂಟರ್‌ಗಳು, ವಿಶೇಷ ಮಾರಾಟ ಪ್ರಚಾರ ಉಡುಗೊರೆ ಯೋಜನೆಗಳು, ಓಣಂ ವಿಶೇಷÀ ಖರೀದಿ ಮಾರುಕಟ್ಟೆ ಚಟುವಟಿಕೆಗಳು ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ಸಪ್ಲೆöÊಕೋ ಸಂಸ್ಥೆಗೆ ಈ ಜವಾಬ್ದಾರಿ ವಹಿಸಲಾಗಿದೆ. ಹಾರ್ಟಿಕಾರ್ಪ್ ನ ವಿಶೇಷ ತರಕಾರಿ ಮಾರುಕಟ್ಟೆಗಳನ್ನು ಆರಂಭಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯ ಕೇಂದ್ರಗಳಲ್ಲಿ ಕುಟುಂಬಶ್ರೀ ಮಾರುಕಟ್ಟೆಗಳನ್ನು ಆಯೋಜಿಸಲಾಗುವುದು. ಸಹಕಾರಿ ಇಲಾಖೆಯ ನೆರವಿನೊಂದಿಗೆ ಗ್ರಾಹಕ ಫೆಡ್‌ನ ಆಶ್ರಯದಲ್ಲಿ ಸಬ್ಸಿಡಿ ಮಾರುಕಟ್ಟೆಗಳನ್ನು ಪ್ರಾರಂಭಿಸಲಾಗುವುದು.

              ಪ್ರಾಥಮಿಕ ಸಹಕಾರಿ ಸಂಸ್ಥೆಗಳ ನೇತೃತ್ವದಲ್ಲಿ ಪ್ರಾದೇಶಿಕ ಓಣಂ ಮಾರುಕಟ್ಟೆಗಳು ಮತ್ತು ಸಹಕಾರಿ ಮಾರುಕಟ್ಟೆಗಳನ್ನು ಪ್ರಾರಂಭಿಸಲಾಗುವುದು. ಕೇರಳದಲ್ಲಿಯೇ ಸಾಧ್ಯವಾದಷ್ಟು ತರಕಾರಿಗಳನ್ನು ಉತ್ಪಾದಿಸಲು ಕ್ರಮಕೈಗೊಳ್ಳಲಾಗುವುದು.

              ಓಣಂ ಮೊದಲು ಎಎವೈ ಗುಂಪುಗಳಿಗೆ ಉಚಿತ ಕಿಟ್ ವಿತರಣೆ, ವಿಶೇಷ ಸಕ್ಕರೆ ವಿತರಣೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ ಮತ್ತು ಬುಡಕಟ್ಟು ಗುಂಪುಗಳಿಗೆ ವಿಶೇಷ ಕಿಟ್‌ಗಳನ್ನು ವಿತರಿಸಲಾಗುವುದು. ಕಾಳಧನ, ಕಾಳಸಂತೆ ಇತ್ಯಾದಿಗಳನ್ನು ನಿಯಂತ್ರಿಸಲು ಅಗತ್ಯ ತಪಾಸಣೆಯನ್ನು ತೀವ್ರಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

                   ಅಲ್ಲದೆ ಇತರೆ ತೊಂದರೆಯಾಗದAತೆ ಪೋಲೀಸರು ವಿಶೇಷ ಕಾಳಜಿ ವಹಿಸಿ ಸಿದ್ಧತೆ ನಡೆಸಬೇಕು ಎಂದು ಸೂಚಿಸಲಾಗಿದೆ. ಪ್ರವಾಸಿಗರಿಗೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗುವುದು. ಸಾರಿಗೆ ವ್ಯವಸ್ಥೆಗಳನ್ನು ಮುಂಚಿತವಾಗಿ ಯೋಜಿಸಲಾಗುವುದು. ವಾಹನ ನಿಲುಗಡೆಗೆ ಸ್ಪಷ್ಟನೆ ನೀಡಬೇಕು. ಮಾದಕ ವಸ್ತುಗಳ ವಶಪಡಿಸಿಕೊಳ್ಳುವುದು, ಸೇವನೆ ಮತ್ತು ವಿತರಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ವಿಶೇಷ ತಪಾಸಣೆ ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. 

          ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ಮಾರುಕಟ್ಟೆಯಿಂದ ಸಂಪೂರ್ಣ ತೊಡೆದುಹಾಕಲು ತಪಾಸಣೆಯನ್ನು ಬಿಗಿಗೊಳಿಸಲಾಗುವುದು. ಏಕ ಬಳಕೆಯ ಎಸೆಯುವ ಉತ್ಪನ್ನಗಳು/ಪ್ಯಾಕೆಟ್‌ಗಳನ್ನು ಸಾಧ್ಯವಾದಷ್ಟು ನಿಲ್ಲಿಸಲಾಗುತ್ತದೆ.  ಬಟ್ಟೆ ಚೀಲಗಳು, ಕಾಗದದ ಚೀಲಗಳು ಇತ್ಯಾದಿಗಳು ಎಲ್ಲಾ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಲಭ್ಯವಿವೆ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries