ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನು ಮಾತಾನಾಡಿದ್ದಾರೆ ಎಂದು ತಿಳಿದಿಲ್ಲವಾದರೂ, ಇದು ಈ ವರ್ಷದ ಕೊನೆಯಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ್ದಾಗಿದೆ ಎನ್ನಲಾಗಿದೆ.
ನವೆಂಬರ್ 5ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅಧ್ಯಕ್ಷ ಜೋ ಬೈಡನ್ ಸ್ಪರ್ಧಿಸಬೇಕೇ ಎಂಬ ಪ್ರಶ್ನೆಗಳು ಎದ್ದಿವೆ. ಭಾರತೀಯ ಮತ್ತು ಆಫ್ರಿಕನ್ ಮೂಲದ ಕಮಲಾ ಹ್ಯಾರಿಸ್ ಅವರೂ ಡೊನಾಲ್ಡ್ ಟ್ರಂಪ್‌ಗೆ ಸವಾಲಾಗಬಹುದು ಎಂಬ ಚರ್ಚೆ ಡೆಮಾಕ್ರಟಿಕ್ ಪಕ್ಷದ ವಲಯಗಳಲ್ಲಿ ನಡೆದಿದೆ.
ಇದನ್ನು ಬೈಡನ್ ತಳ್ಳಿಹಾಕಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ, ರಿಪಬ್ಲಿಕನ್ ಪಕ್ಷದ ಟ್ರಂಪ್ ಅವರನ್ನು ಸೋಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.