ಕಾಸರಗೋಡು: ಕೇರಳ ಸರ್ಕಾರ ಪಿಂಚಣಿ ಸುಧಾರಣಾ ಆಯೋಗವನ್ನು ನೇಮಿಸಬೇಕು ಮತ್ತು ಪಿಂಚಣಿ ಸುಧಾರಣೆಗೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇರಳ ರಾಜ್ಯ ಪಿಂಚಣಿದಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ ಈಶ್ವರ ರಾವ್ ಸರ್ಕಾರವನ್ನು ಒತ್ತಾಯಿಸಿದರು.
ಕೇರಳ ರಜ್ಯ ಪಿಂಚಣಿದಾರರ ಸಂಘ್(ಕೆಎಸ್‍ಪಿಎಸ್)ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಂಘಟನೆ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಖಜಾನೆ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.
ವೇತನ ಪಿಂಚಣಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಬೇಕು, ತಡೆ ಹಿಡಿದಿರುವ ಕಲ್ಯಾಣ ಪಿಂಚಣಿಗಳನ್ನು ತಕ್ಷಣ ಮಂಜೂರು ಮಾಡಬೇಕು ಹಾಗೂ ಮೆಡಿಸಿಪ್‍ನಲ್ಲಿ ಅಗತ್ಯ ತಿದ್ದುಪಡಿ ತರಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷರಾದ ಮುತ್ತುಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಎನ್‍ಜಿಓ ಸಂಘದ ಜಿಲ್ಲಾಧ್ಯಕ್ಷ ಕೆ. ರಂಜಿತ್ ಕೆಎಸ್‍ಪಿಎಸ್ ಪದಾಧಿಕಾರಿಗಳಾದ ಸವಿತಾ ಟೀಚರ್, ಎ.ವಿ.ನಾರಾಯಣನ್ ಮಾಸ್ಟರ್, ನಾಗರಾಜ ಭಟ್ ಶ್ರೀಧರ ರಾವ್ ಮೊದಲಾದವರು ಉಪಸ್ಥಿತರಿದ್ದರು. ಧರಣಿಗೆ ಪೂರ್ವಭಾವಿಯಗಿ ನೂರಾರು ಮಂದಿ ಸದಸ್ಯರನ್ನೊಳಗೊಂಡ ಪ್ರತಿಭಟನಾ ಮೆರವಣಿಗೆ ನಡೆಯಿತು.