ಆಲಪ್ಪುಳ: ದೇವಸ್ಥಾನದ ಕೆರೆಯಲ್ಲಿ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಅಂಬಲಪ್ಪುಳ ಶ್ರೀಕೃಷ್ಣ ಸ್ವಾಮಿ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಅಂಬಲಪುಳ ಮೂಲದ ಮುಖೇಶ್ ಅವರ ಮೃತದೇಹ ದೇವಸ್ಥಾನದ ಕೆರೆಯಲ್ಲಿ ಪತ್ತೆಯಾಗಿದೆ. ಈ ಹಿಂದೆ ನಾಪತ್ತೆಯಾಗಿದ್ದ ಆತನಿಗಾಗಿ ಸ್ಥಳೀಯರು ಹುಡುಕಾಟ ನಡೆಸಿದ್ದರು.
ಕೆರೆ ನೀರು ವಿಲೇವಾರಿಗೊಳಿಸಿ ಪರಿಹಾರ ಕ್ರಮ ಕೈಗೊಂಡ ನಂತರವೇ ದೇವಸ್ಥಾನ ತೆರೆಯಲಾಗುವುದು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ. ದೇವಸ್ಥಾನದ ಕೊಳದ ಕಲ್ಲಿನ ಮೆಟ್ಟಿಲುಗಳಿಂದ ಯುವಕನ ಶೂ ಪತ್ತೆಯಾದ ನಂತರ ಅಗ್ನಿಶಾಮಕ ದಳದವರು ಶೋಧ ನಡೆಸಿದ್ದರು.
ನಂತರ ಶವ ಪತ್ತೆಯಾಗಿದೆ. ಇದರೊಂದಿಗೆ ದೇವಸ್ಥಾನವನ್ನು ಮುಚ್ಚಲಾಯಿತು. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮುಖೇಶ್ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.