HEALTH TIPS

'ಬುಡಕಟ್ಟು ಜನಸಂಖ್ಯೆಯ ಪ್ರಮಾಣ ಇಳಿಕೆ: ಅಮಿತ್ ಶಾ

           ರಾಂಚಿ: ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬುಡಕಟ್ಟು ಜನರ ಭೂಮಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಜನಸಂಖ್ಯೆಯ ಕುರಿತು ಶ್ವೇತಪತ್ರ ಹೊರಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ತಿಳಿಸಿದ್ದಾರೆ.

         ಜಾರ್ಖಂಡ್‌ನ ತಾರಾ ಮೈದಾನದಲ್ಲಿ ನಡೆದ ಬಿಜೆಪಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅಮಿತ್‌ ಶಾ ಅವರು, 'ತೀವ್ರವಾದ ಒಳನುಸುಳುವಿಕೆಯಿಂದ ಜಾರ್ಖಂಡ್‌ನಲ್ಲಿ ಬುಡಕಟ್ಟು ಜನರ ಸಂಖ್ಯೆಯು ಕಡಿಮೆಯಾಗುತ್ತಿದೆ' ಎಂದರು.

           'ಲೋಕಸಭೆ ಚುನಾವಣೆಯಲ್ಲಿ 81 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 52 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

             'ಮತಬ್ಯಾಂಕ್‌ ಮತ್ತು ಓಲೈಕೆ ನೀತಿಯ ಮೂಲಕ ಜಾರ್ಖಂಡ್‌ನ ಬುಡಕಟ್ಟು ಮುಖ್ಯಮಂತ್ರಿಯವರು ಲವ್‌ ಜಿಹಾದ್‌ ಮತ್ತು ಲ್ಯಾಂಡ್‌ ಜಿಹಾದ್‌ಗಳಲ್ಲಿ ಭಾಗಿಯಾಗಿದ್ದಾರೆ. ಇದು ಜನಸಂಖ್ಯಾ ಬದಲಾವಣೆಗೆ ಕಾರಣವಾಗುತ್ತಿದೆ' ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ ಹೆಸರೆತ್ತದೆ ಪರೋಕ್ಷವಾಗಿ ಆರೋಪಿಸಿದರು.

          'ಸಾವಿರಾರು ಜನ ಜಾರ್ಖಂಡ್‌ ಒಳಗೆ ನುಸುಳುತ್ತಿದ್ದಾರೆ, ಬುಡಕಟ್ಟು ಜನಾಂಗದ ಯುವತಿಯರನ್ನು ವಿವಾಹವಾಗುತ್ತಿದ್ದಾರೆ, ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ ಮತ್ತು ಭೂಮಿಯನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಜನರಿಗೆ ಉದ್ಯೋಗವಕಾಶಗಳು ಕೈತಪ್ಪುತ್ತಿದೆ. ಸೊರೆನ್‌ ಅವರ ಯೋಜನೆಗಳಿಂದ ಅವರ ಕುಟುಂಬಕ್ಕೆ ಮಾತ್ರ ಲಾಭವಾಗುತ್ತಿದೆ' ಎಂದು ಟೀಕಿಸಿದರು.

                 ರಾಹುಲ್‌ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟ‌ದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್‌ ಶಾ ಅವರು, 'ಲೋಕಸಭೆ ಚುನಾವಣೆಯಲ್ಲಿ ಸೋತರೂ ಅಹಂಕಾರವನ್ನು ತೋರುತ್ತಿದ್ದಾರೆ. 12 ಲಕ್ಷ ಕೋಟಿ ಹಗರಣ, ಓಲೈಕೆ, ಕುಟುಂಬ ರಾಜಕಾರಣ, ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries