HEALTH TIPS

ನೊಬೆಲ್‌ ಸಿಗದಿದ್ದರೂ ಜೀವನ ವ್ಯರ್ಥ ಎಂದು ಭಾವಿಸಿರಲಿಲ್ಲ: ಅಮರ್ತ್ಯ ಸೇನ್‌

             ಬೋಲ್‌ಪುರ್‌ : 'ಜೀವನದಲ್ಲಿ ನೊಬೆಲ್‌ ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ದೊಡ್ಡ ಗುರಿ ಇರಬೇಕು' ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ತಿಳಿಸಿದ್ದಾರೆ.'‌

          'ಪ್ರಶಸ್ತಿ ಪಡೆದಿರುವುದು ಸಂತೋಷದ ವಿಷಯ. ಅದು ಸಿಗದಿದ್ದರೂ, ನನ್ನ ಜೀವನ ವ್ಯರ್ಥವಾಗುತ್ತಿರಲಿಲ್ಲ' ಎಂದು ಭೀರಭೂಮ್ ಜಿಲ್ಲೆಯ ಬೋಲ್‌ಪುರದ ತಮ್ಮ ಪೂರ್ವಜರ ನಿವಾಸದಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ನನಗೆ ಸಿಕ್ಕಿದ ನೊಬೆಲ್‌ ಪ್ರಶಸ್ತಿಯಿಂದ ಸಂತೋಷವಾಗಿದ್ದೇನೆ. ಅದು ಸಿಗದಿದ್ದರೂ ಜೀವನ ವ್ಯರ್ಥವಾಗುತ್ತಿತ್ತು ಎಂದು ಭಾವಿಸುವುದಿಲ್ಲ. ಪ್ರಶಸ್ತಿಯಿಂದ ಬಂದ ಹಣದಿಂದ 'ಪ್ರತೀಚೀ ಟ್ರಸ್ಟ್‌' ಸ್ಥಾಪನೆ ಮಾಡಲು ನೆರವಾಯಿತು' ಎಂದ ಅವರು, 'ಶಿಕ್ಷಣ, ಹಾಗೂ ಮಕ್ಕಳ ಆರೋಗ್ಯ ಕುರಿತಾದ ಕುರಿತಾದ ಸಂಶೋಧನೆಯಲ್ಲಿ ಸಂಸ್ಥೆ ತೊಡಗಿದೆ' ಎಂದು ತಿಳಿಸಿದರು.

             ಕಲ್ಯಾಣ ಅರ್ಥಶಾಸ್ತ್ರ ಹಾಗೂ ಬಡವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಆಸಕ್ತಿಯನ್ನು‌ ಗುರುತಿಸಿ ಅಮರ್ತ್ಯ ಸೇನ್‌ ಅವರಿಗೆ 1998ರಲ್ಲಿ ನೊಬೆಲ್‌ ಬಹುಮಾನ ನೀಡಲಾಗಿತ್ತು.

'ನೊಬೆಲ್‌ ಪ್ರಶಸ್ತಿಯು ನನಗೆ ಬಂದದ್ದರಿಂದ ಭಾರತ ಹಾಗೂ ಬಾಂಗ್ಲಾದೇಶವನ್ನು ಗುರಿಯಾಗಿರಿಸಿಕೊಂಡು ಸಾಕ್ಷರತೆ, ಮೂಲಭೂತ ಆರೋಗ್ಯ ರಕ್ಷಣೆ, ಲಿಂಗ ಸಮಾನತೆ ಕುರಿತು ಪ್ರಾಯೋಗಿಕವಾಗಿ ತಕ್ಷಣವೇ ನಾನು ಕೆಲಸ ಮಾಡಲು ಅವಕಾಶ ಒದಗಿಬಂದಿತು. ಪ್ರಶಸ್ತಿಯಿಂದ ಬಂದ ಸ್ವಲ್ಪ ಹಣದಿಂದ ಆರಂಭಿಸಿದ 'ಪ್ರತೀಚೀ ಟ್ರಸ್ಟ್‌' ಮೂಲಕ ದೊಡ್ಡದಾದ ಸಮಸ್ಯೆಗಳಿಗೆ ಸಣ್ಣ ಮಟ್ಟದ ಪರಿಹಾರ ನೀಡುವ ಪ್ರಯತ್ನ ನಡೆಯಿತು. 50 ವರ್ಷಗಳ ಹಿಂದೆ ಶಾಂತಿನಿಕೇತನದ ಸುತ್ತಲಿನ ಗ್ರಾಮಗಳಲ್ಲಿ ಆರಂಭಿಸಿದ ರಾತ್ರಿ ಶಾಲೆಗಳನ್ನು ನಡೆಸುತ್ತಿದ್ದ ಹಳೆಯ ಉತ್ಸಾಹವನ್ನೇ ಮತ್ತೆ ಅನುಭವಿಸಲು ಸಂತಸವಾಗಿದೆ' ಎಂದು ಸೇನ್‌ ತಿಳಿಸಿದರು.

                 ನಾಮಕರಣ ಮಾಡಿದ್ದೇ ಠಾಗೋರ್: 'ರವೀಂದ್ರನಾಥ ಟ್ಯಾಗೋರ್‌ ಅವರೇ ನನಗೆ ಹೆಸರು ನಾಮಕರಣ ಮಾಡಿದ್ದರು. ನಾನು ಹುಟ್ಟಿದ ತಕ್ಷಣವೇ ತಾಯಿಗೆ ಪತ್ರ ಬರೆದಿದ್ದ ಅವರು, ಯಾವುದಾದರೂ ಹೊಸ ಹೆಸರು ಇಡುವಂತೆ ಸೂಚಿಸಿದ್ದರು. ಕೊನೆಗೆ ಅವರೇ 'ಅಮರ್ತ್ಯ' ಎಂದು ಸೂಚಿಸಿದರು. ನನ್ನ ಜೀವನದಲ್ಲಿ ತಾಯಿ ಅಮಿತಾ- ತಂದೆ ಅಶುತೋಷ್‌ ಅವರಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗಿದ್ದೇನೆ. ಇಬ್ಬರೊಂದಿಗೆ ತುಂಬಾ ನಿಕಟವಾಗಿದ್ದೆ. ತಾಯಿ ಲೇಖಕಿ, ಸಂಪಾದಕಿ, ಭರತನಾಟ್ಯ, ಮಣಿಪುರ ನೃತ್ಯ ಮಾಡುತ್ತಿದ್ದರು. ಅವರ ಜೊತೆಗೆ ಹಲವು ನಾಟಕ, ನೃತ್ಯದಲ್ಲಿ ಭಾಗವಹಿಸಿದ್ದೆನು. ತಾಯಿ 'ಜುಡೋ' ಕಲಿಯಲು ಮುಂದಾಗಿದ್ದರು. ತಂದೆ ಅತ್ಯಂತ ಯಶಸ್ವಿ ಪ್ರಾಧ್ಯಾಪಕರಾಗಿದ್ದರು' ಎಂದರು. ಶಾಂತಿನಿಕೇತನದಲ್ಲಿ ತಾವು ಕಳೆದ ದಿನಗಳನ್ನೂ ಅವರು ಮೆಲುಕುಹಾಕಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries