ಕೊಚ್ಚಿ: ತಿರುವನಂತಪುರAನ ಶ್ರೀಪದ್ಮನಾಭಸ್ವಾಮಿ ದೇಗುಲದ ಆವರಣದಲ್ಲಿ ಚಿಕನ್ ಬಿರಿಯಾನಿ ನೀಡಿದ ಆರೋಪಕ್ಕೆ ಸಂಬAಧಿಸಿದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಭದ್ರತಾ ಅಧಿಕಾರಿಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ.
ಭಕ್ತರ ಗುಂಪು ನೀಡಿದ ಮನವಿಯನ್ನು ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್, ನ್ಯಾಯಮೂರ್ತಿ ಹರಿಶಂಕರ್ ವಿ. ಮೆನನ್ ಮತ್ತು ಇತರರನ್ನು ಒಳಗೊಂಡ ವಿಭಾಗೀಯ ಪೀಠವು ಇದನ್ನು ಪರಿಗಣಿಸಿತು. ನೌಕರನ ಮಗನಿಗೆ ಕೆಲಸ ಸಿಕ್ಕಿದ ಕಾರಣ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯ ಊಟದ ಕೊಠಡಿಯಲ್ಲಿ ಬಿರಿಯಾನಿ ಔತಣ ನಡೆಸಲಾಗಿದೆ ಎಂದು ಆರೋಪ ಅರ್ಜಿ ಸಲ್ಲಿಸಲಾಗಿದೆ. ದೇವಸ್ಥಾನದ ಮುಖ್ಯ ಭದ್ರತಾ ಅಧಿಕಾರಿಯನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ನಂತರ ಅರ್ಜಿಯನ್ನು ಮತ್ತೆ ಜು.೨೯ಕ್ಕೆ ಮುಂದೂಡಲಾಯಿತು.
ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಿಕನ್ ಬಿರಿಯಾನಿ ಔತಣ ನಡೆದಿದೆ ಎಂಬ ಸುದ್ದಿ ಹಬ್ಬಿದಾಗ ಅದನ್ನು ತಡೆಯಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಧ್ಯ ಪ್ರವೇಶಿಸಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ದೇವಸ್ಥಾನದ ಆವರಣದಲ್ಲಿ ಮಾಂಸಾಹಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
೬ ರಂದು ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಿಕನ್ ಬಿರಿಯಾನಿ ಬಾಡೂಟ ಕೂಟ ಏರ್ಪಡಿಸಲಾಗಿತ್ತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿಯಲ್ಲಿ ಮಾಂಸಾಹಾರ ಕೂಟ ನಡೆದಿತ್ತು.
ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳ ಗಂಭೀರ ಉಲ್ಲಂಘನೆ ನಡೆದ ಹಿನ್ನೆಲೆಯಲ್ಲಿ ಭಕ್ತರು ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು.