ಬದಿಯಡ್ಕ: ರೋಟರಿ ಬದಿಯಡ್ಕದ ವತಿಯಿಂದ ಪೀನ ದರ್ಪಣ(ಕಾನ್ವೆಕ್ಸ್ ಮಿರರ್) ದ ಲೋಕಾರ್ಪಣಾ ಸಮಾರಂಭ ಬೀಜಂತ್ತಡ್ಕದ ಸಮೀಪದ ಮಾಯಿಲಂಕೋಡಿ ತಿರುವಿನಲ್ಲಿ ಜರಗಿತು.
ಕಾರ್ಯಕ್ರಮವನ್ನು ಬದಿಯಡ್ಕ ಪಂಚಾಯತಿ ಅಧ್ಯಕ್ಷೆ ಹಾಗೂ ವಾರ್ಡ್ ಸದಸ್ಯೆ ಬಿ. ಶಾಂತಾ ಉದ್ಧಾಟಿಸಿ ರೋಟರೀ ಕ್ಲಬ್ ನ ಜನಪರ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿ ಮಾತನಾಡಿದರು. ರೋಟರಿ ಅಧ್ಯಕ್ಷ ಬಿ.ಕೇಶವ ಪಾಟಾಳಿ ಅವರು ಅಪಘಾತ ವಲಯವಾದ ಈ ತಿರುವಿನಲ್ಲಿ ವಾಹನ ಚಾಲಕರಿಗೆ ಅತ್ಯುಪಯುಕ್ತವಾದ ಪೀನ ದರ್ಪಣದ ಅವಶ್ಯಕತೆಯನ್ನು ಮನಗೊಂಡು ಸ್ಥಾಪಿಸಲು ಅನುಮತಿಯನ್ನಿತ್ತ ಕಾಞ0ಗಾಡ್ ನ ರಾಜ್ಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯ, ಪತ್ರಕರ್ತ ಹಾಗೂ ರೊಟೇರಿಯನ್ ಗಳಾದ ಅಖಿಲೇಶ್ ನಗುಮುಗಂ, ಶಿಬು ಜಾನ್, ಬಿ. ಅರವಿಂದ್ ಪೈ, ಸಿ. ಎಚ್.ಸುಧಾಕರನ್ ನವಶಕ್ತಿ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಚಂದ್ರನ್ ಪೊಯ್ಯೆಕಂಡ ಮೊದಲಾದವರು ಪಾಲ್ಗೊಂಡು ಬದಿಯಡ್ಕ ರೋಟರಿ ಕ್ಲಬ್ ನ ಚಟುವಟಿಕೆಗಳನ್ನು ಮೆಚ್ಚಿ ಮುಕ್ತಕಂಠದಿಂದ ಪ್ರಶಂಸಿದರು.
ರೋಟರಿ ಬದಿಯಡ್ಕದ ಸರ್ಜಂಟ್ ಎಟ್ ಆಮ್ರ್ಸ್ ಪ್ರತೀಕ್ ಆಳ್ವ ಪೆರಡಾಲ ಹಾಗೂ ಇತರ ರೊಟೇರಿಯನ್ ಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ರೋಟರಿ ಕೋಶಾಧಿಕಾರಿ ಬಿ. ಗೋಪಾಲಕೃಷ್ಣ ಕಾಮತ್ ಸ್ವಾಗತಿಸಿ, ರೋಟರಿ ಕ್ಲಬ್ ಬದಿಯಡ್ಕ ಘಟಕದ ಕಾರ್ಯದರ್ಶಿ ರಮೇಶ್ ಆಳ್ವ ಕಡಾರು ವಂದಿಸಿದರು.