HEALTH TIPS

ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌, ಅಶೋಕ್ ಹಾಲ್‌ಗೆ ಮರುನಾಮಕರಣ

          ವದೆಹಲಿ: ರಾಷ್ಟ್ರಪತಿ ಭವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಲಾಗುವ ದರ್ಬಾರ್ ಹಾಲ್ ಮತ್ತು ಅಶೋಕ್ ಹಾಲ್‌ಗಳ ಹೆಸರುಗಳನ್ನು ಕ್ರಮವಾಗಿ 'ಗಣತಂತ್ರ ಮಂಟಪ' ಮತ್ತು 'ಅಶೋಕ ಮಂಟಪ' ಎಂದು ಮರುನಾಮಕರಣ ಮಾಡಲಾಗಿದೆ.

         ರಾಷ್ಟ್ರಪತಿಗಳ ಕಚೇರಿ ಮತ್ತು ನಿವಾಸವಾಗಿರುವ ರಾಷ್ಟ್ರಪತಿಭವನವು ದೇಶದ ಜನರ ಅಮೂಲ್ಯ ಪರಂಪರೆಯ ಸಂಕೇತವಾಗಿ.

          ರಾಷ್ಟ್ರಪತಿ ಭವನವನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ರಾಷ್ಟ್ರಪತಿ ಭವನದ ವಾತಾವರಣದಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವ ನಿರಂತರ ಪ್ರಯತ್ನ ಸಾಗಿದೆ ಎಂದು ರಾಷ್ಟ್ರಪತಿ ಭವನದ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

           ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳಾದ ದರ್ಬಾರ್ ಹಾಲ್‌ ಮತ್ತು ಅಶೋಕ್ ಹಾಲ್‌ಗೆ ಕ್ರಮವಾಗಿ 'ಗಣತಂತ್ರ ಮಂಟಪ' 'ಅಶೋಕ ಮಂಟಪ'ವೆಂದು ಮರುನಾಮಕರಣ ಮಾಡಿರುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.

ರಾಷ್ಟ್ರ ಪ್ರಶಸ್ತಿಗಳ ಪ್ರದಾನ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳನ್ನು ದರ್ಬಾಲ್ ಹಾಲ್‌ನಲ್ಲಿ ಆಯೋಜಿಸಲಾಗುತ್ತಿತ್ತು.

         'ಭಾರತದಲ್ಲಿ ಆಡಳಿತ ನಡೆಸಿದ ರಾಜರ ಆಸ್ಥಾನಗಳಿಗೆ ದರ್ಬಾರ್ ಎಂದು ಕರೆಯಲಾಗುತ್ತಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ಅದರ ಅರ್ಥ ಕಳೆದುಕೊಂಡಿದೆ. ಗಣತಂತ್ರ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಬೇರೂರಿದೆ. ದರ್ಬಾರ್ ಹಾಲ್‌ಗೆ 'ಗಣತಂತ್ರ ಮಂಟಪ' ಎಂಬ ಹೆಸರು ಸೂಕ್ತವಾಗಿದೆ' ಎಂದೂ ಪ್ರಕಟಣೆ ತಿಳಿಸಿದೆ.

              ಅಶೋಕ ಹಾಲ್ ಮೂಲಭೂತವಾಗಿ ಸಾಂಸ್ಕೃತಿಕ ಸಭಾಂಗಣವಾಗಿದೆ. ಅಶೋಕ ಎಂಬ ಪದವು ಎಲ್ಲಾ ದುಃಖಗಳಿಂದ ಮುಕ್ತ ಅಥವಾ ದುಃಖಗಳಿಂದ ದೂರವಿರುವ' ವ್ಯಕ್ತಿಯನ್ನು ಸೂಚಿಸುತ್ತದೆ ಎಂದು ಹೇಳಿಕೆ ತಿಳಿಸಿದೆ. ಅಲ್ಲದೆ, ಚಕ್ರವರ್ತಿ ಅಶೋಕನನ್ನು ಸೂಚಿಸುವುದರಿಂದ ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ ಎಂದು ಅದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries