ಗಾಜಾ: ಹಮಾಸ್ ಸೇನಾ ನಾಯಕರನ್ನು ಗುರಿಯಾಗಿಸಿ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್ ಸೇನೆ ಶನಿವಾರ ಹೇಳಿದೆ.
ಖಾನ್ ಯೂನಿಸ್ ನಗರದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 71 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ಕಿಡಿಕಾರಿತ್ತು.
ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು 2023ರ ಅಕ್ಟೋಬರ್ 7ರಂದು ದಾಳಿ ನಡೆಸಿದ್ದರು. ಈ ವೇಳೆ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ದಾಳಿಯ ರೂವಾರಿಗಳನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಅಕ್ಟೋಬರ್ 7ರಂದು ನಡೆಸಿದ ಹತ್ಯಾಕಾಂಡದ ರೂವಾರಿಗಳಾದ ಹಮಾಸ್ ಸೇನಾ ನಾಯಕ ಮೊಹಮ್ಮದ್ ಡಿಯಾಫ್ ಹಾಗೂ ಕಮಾಂಡರ್ ರಫಾ ಸಲಾಮ ಅವರನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಸಂಘರ್ಷದಿಂದಾಗಿ ದಕ್ಷಿಣ ಗಾಜಾದಲ್ಲಿ ನೆಲೆ ಕಳೆದುಕೊಂಡಿರುವವರಿಗಾಗಿ ತೆರೆದಿರುವ ಅಲ್-ಮವಾಸಿ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 71 ಜನರು ಮೃತಪಟ್ಟಿದ್ದು, 289 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ಹೇಳಿದೆ.