ಕಾಸರಗೋಡು : ಸಾವಯವ ಮತ್ತು ಅಜೈವಿಕ ತ್ಯಾಜ್ಯ ನಿರ್ವಹಣೆಯೊಂದಿಗೆ ದ್ರವ ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವ್ಯವಸ್ಥೆಗಳನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲ ಕೃಷ್ಣನ್ ತಿಳಿಸಿದ್ದರೆ. ಅವರು ಕಾಸರಗೋಡು ಜಿಲ್ಲಾ ಜಂಟಿ ನಿರ್ದೇಶಕರ ಕಛೇರಿಯ ತರಬೇತಿ ಸಭಾಂಗಣದಲ್ಲಿ ಕಸಮುಕ್ತ ನವಕೇರಳ ನಗರಸಭಾ ಮಟ್ಟದ ಕಾರ್ಮಿಕರಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರು. ಸ್ಥಳೀಯಾಡಳಿತ, ವಿವಿಧ ಸಂಸ್ಥೆಗಳು ಮತ್ತು ಇಲಾಖೆಗಳ ಸಮನ್ವಯದೊಂದಿಗೆ ವಿವಿಧ ಹಂತಗಳಲ್ಲಿ ಪರಿಣಾಮಕಾರಿ ಯೋಜನೆ ರೂಪಿಸಬೇಕು ಎಂದು ತಿಳಿಸಿದರು. ನವ ಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಪ್ರಧಾನ ಭಾಷಣ ಮಾಡಿದರು. ಕೆ.ಮನೋಜಕುಮಾರ್, ಎನ್.ಮನೋಜಕುಮಾರ್, ಶುಚಿತ್ವ ಮಿಷನ್ ವ್ಯವಸ್ಥಾಪಕ ಕೆ.ಸಿ.ಲತೀಶ್ ವಿಷಯ ಮಂಡಿಸಿದರು. ನವ ಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ಮತ್ತು ಕೇರಳ ಘನ ತ್ಯಾಜ್ಯ ನಿರ್ವಹಣೆ ಯೋಜನೆ ಜಿಲ್ಲಾ ಸಂಯೋಜಕ ಮಿಥುನ್ ಕೃಷ್ಣನ್ ತರಗತಿ ನಡೆಸಿದರು. ಕಾಞಂಗಾಡ್ ನಗರಸಭಾ ಮಟ್ಟದ ಅಜೈವಿಕ ತ್ಯಾಜ್ಯ ನಿರ್ವಹಣಾ ಮಾದರಿ ಬಗ್ಗೆ ರಹನಾ ಮತ್ತು ನೀಲೇಶ್ವರಂನಲ್ಲಿ ಸಾವಯವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಬಗ್ಗೆ ಇ.ಕೆ.ಪ್ರಕಾಶ್, ರಾಜ್ಯ ಮಾದರಿಗಳ ಬಗ್ಗೆ ಸ್ಥಳೀಯಾಡಳಿತ ಸಂಸ್ಥೆ ಸಹಾಯಕ ನಿರ್ದೇಶಕ ಸುಭಾಷ್ ಟಿ.ವಿ ತರಗತಿ ನಡೆಸಿದರು. ಸ್ಥಳೀಯಾಡಳಿತ ಸಂಸ್ಥೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಸ್ವಾಗತಿಸಿದರು.
ಜೈವಿಕ ತ್ಯಾಜ್ಯ ನಿರ್ವಹಣೆ, ಅಜೈವಿಕ ತ್ಯಾಜ್ಯ ನಿರ್ವಹಣೆ, ಹಸಿರು ಕ್ರಿಯಾ ಸೇನೆ ಕಾನೂನು ವಿಧಾನಗಳು, ಐಇಸಿ ವಿಷಯಗಳ ಕುರಿತು ಗುಂಪು ಚರ್ಚೆ ನಡೆಸಲಾಯಿತು. ಕಸ ಮುಕ್ತ ನವಕೇರಳ ಸಹ ಸಂಯೋಜಕ ಎಚ್.ಕೃಷ್ಣಮ ಶುಚಿತ್ವ ಮಿಷನ್ ಸಂಯೋಜಕ ಪಿ.ಜಯನ್, ಕಿಲಾ ಸಂಚಾಲಕ ಕೆ.ಅಜಯಕುಮಾರ್, ಕ್ಲೀನ್ ಕೇರಳ ಕಂಪನಿ ಜಿಲ್ಲಾ ವ್ಯವಸ್ಥಾಪಕ ಮಿಥುನ್ ಗೋಪಿ, ಶುಚಿತ್ವ ಮಿಷನ್ ಯೋಜನಾ ವ್ಯವಸ್ಥಾಪಕ ಕೆ.ವಿ.ರಜನೀತ್ ನೇತೃತ್ವ ವಹಿಸಿದ್ದರು.