ಕಣ್ಣೂರು: ಕಣ್ಣೂರಿನಲ್ಲಿ ಮತ್ತೆ ಅಮೀಬಿಕ್ ಎನ್ಸೆಫಾಲಿಟಿಸ್ ಇರುವುದು ದೃಢಪಟ್ಟಿದೆ. ಮೂರೂವರೆ ವರ್ಷದ ಬಾಲಕನಿಗೆ ಈ ಕಾಯಿಲೆ ಇರುವುದು ಪತ್ತೆಯಾಗಿದೆ.
ಬಾಲಕನನ್ನು ನಿನ್ನೆ ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಇಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಪರಿಯಾರಂ ಮೂಲದ ಬಾಲಕ ನಿನ್ನೆ ಸಮೀಪದ ಜಲಪಾತದಲ್ಲಿ ಸ್ನಾನ ಮಾಡಿದ್ದ. ಇದೇ ರೋಗಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.