ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಜು.೨೮ ಭಾನುವಾರ “ಕರ್ಕಾಟಕ ಮಾಸದ ಔಷÀಧೀಯ ಗಂಜಿ” ಕಾರ್ಯಕ್ರಮ ಆಯೋಜಿಸಲಾಗಿದೆ. ಕೇರಳದ ನಾಟಿವೈದ್ಯರುಗಳು ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷÀಧೀಯ ಗಿಡಮೂಲಿಕೆಗಳಿಂದ ಮತ್ತು ಪರಿಸರದಲ್ಲೇ ಬೆಳೆಯುವ ಗಿಡ, ಬಳ್ಳಿ, ಎಲೆ, ಹೂ, ಇತ್ಯಾದಿಗಳನ್ನು ಬಳಸಿ ಗಂಜಿ ಮತ್ತು ಖಾದ್ಯ ಪದಾರ್ಥಗಳನ್ನು ತಯಾರಿಸಲಿದ್ದಾರೆ. ಪೂರ್ವಾಹ್ಣ ೧೦.೩೦ ಕ್ಕೆ ಆರೋಗ್ಯ ಮಾಹಿತಿ ಶಿಬಿರ , ೧೧.ಕ್ಕೆ ಕರ್ನಾಟಕ ಆರ್ಯುವೇದ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ಡಾ. ರವಿರಾವ್ ಇವರು ಔಷದೀಯ ಗಂಜಿಯ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ೧೧.೪೫ ಕ್ಕೆ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಿನ್ನಿಂಗಾರು ಸಸಿಹಿತ್ಲುವಿನ ಪ್ರಸಿದ್ದ ನಾಟಿ ವೈದ್ಯೆ ಶ್ಯಾಮಲಾ ರೈ ಅವರಿಗೆ ಈ ವರ್ಷದ "ಆಯು ಶ್ರೀ" ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.