ಕಾಸರಗೋಡು: ಮಳೆಗಾಲ ಬಿರುಸುಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಜ್ವರ ಬಾಧೆಯೂ ಹೆಚ್ಚಗತೊಡಗಿದೆ. ಜಿಲ್ಲಾಸ್ಪತ್ರೆ, ಜನರಲ್ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜ್ವರ ಬಾಧಿಸಿ ಚಿಕಿತ್ಸೆಗೆ ಆಗಮಿಸುತ್ತಿರುವವರ ಸಂಖೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ.
ಕಾಸರಗೋಡು ಜನರಲ್ ಆಸ್ಪತ್ರೆ ಒಂದರಲ್ಲೇ ದಿನ ಒಂದಕ್ಕೆ 2ಸಾವಿರದಷ್ಟು ರೋಗಿಗಳು ಚಿಕಿತ್ಸೆ ಅರಸಿ ಆಗಮಿಸುತ್ತಿದ್ದಾರೆ. ವೈದ್ಯರನ್ನು ಕಾಣಲು ಟೋಕನ್ ತೆಗೆಯಲು ಬೆಳಗ್ಗಿನಿಂದಲೇ ರೋಗಿಗಳ ಸರತಿಸಾಲು ಕಂಡುಬರುತ್ತದೆ. ಜ್ವರಬದಿಸಿ ಚಿಕಿತ್ಸೆಗೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಜ್ವರ ಹೊರ ರೋಗಿ ವಿಭಾಗ ಆರಂಬಿಸಲಾಗಿದೆ. ಸಣ್ಣ ಮಕ್ಕಳಲ್ಲಿ ಜ್ವರಬಾಧೆ ಹೆಚ್ಚುತ್ತಿರುವುದು ಹೆತ್ತವರಲ್ಲಿ ಆತಂಕಕ್ಕೆ ಕಾರಣವಾಘಿದೆ. ಚಿಕಿತ್ಸೆಗೆ ಆಗಮಿಸುವ ಬಹುತೇಕ ಮಕ್ಕಳಲ್ಲಿ ನೂರು ಡಿಗ್ರಿಗಿಂತಲೂ ಹೆಚ್ಚಿನ ಜ್ವರ ಕಾಣಿಸಿಕೊಳ್ಳುತ್ತಿದೆ. ಜ್ವರ ಹಲವು ದಿವಸಗಳ ವರೆಗೂ ಮುಂದುವರಿಯುತ್ತಿದ್ದು, ವಾಸಿಯಾಗಲು ಹೆಚ್ಚಿನ ಕಾಲಾವಕಾಶ ತಗಲುತ್ತಿರುವುದಾಘಿ ವೈದ್ಯರು ತಿಳಿಸುತ್ತರೆ. ಜತೆಗೆ ವಾಂತಿ, ಹೊಟ್ಟೆನೋವು, ಹಳದಿಕಾಮಾಲೆ, ಡೆಂಘೆ ಕಾಣಿಸಿಕೊಳ್ಳುತ್ತಿದ್ದು, ಜನತೆ ಜಾಗ್ರತೆ ಪಾಲಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.