HEALTH TIPS

'ದರ್ಬಾರ್' ಅಲ್ಲ 'ಶೆಹನ್‌ಷಾ' ಪರಿಕಲ್ಪನೆ ಇದೆ: ಪ್ರಿಯಾಂಕಾ ಗಾಂಧಿ ವಾದ್ರಾ

          ವದೆಹಲಿ: ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳಾದ 'ದರ್ಬಾರ್ ಹಾಲ್' ಮತ್ತು 'ಅಶೋಕ ಹಾಲ್' ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ.

          ಈ ಕುರಿತು ಸಂಸತ್ ಆವರಣದಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ,'ಅಲ್ಲಿ ದರ್ಬಾರ್' ಪರಿಕಲ್ಪನೆ ಇಲ್ಲ. ಆದರೆ 'ಶೆಹನ್‌ಷಾ' ಪರಿಕಲ್ಪನೆ ಇದೆ' ಎಂದು ಹೇಳಿದ್ದಾರೆ.

           ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


             ಈ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆಗಿದ್ದರು. ಈ ಸಂಬಂಧ ವಿಡಿಯೊವನ್ನು 'ಪಿಟಿಐ' ಬಿಡುಗಡೆಗೊಳಿಸಿದೆ.

                   ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳ ಹೆಸರುಗಳನ್ನು ಬದಲಿಸಲಾಗಿದೆ. 'ದರ್ಬಾರ್ ಹಾಲ್' ಅನ್ನು 'ಗಣತಂತ್ರ ಮಂಟಪ' ಮತ್ತು 'ಅಶೋಕ ಹಾಲ್' ಅನ್ನು 'ಅಶೋಕ ಮಂಟಪ' ಎಂದು ಮರುನಾಮಕರಣ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries