ಮಂಜೇಶ್ವರ: ಕೇರಳ ವಿದ್ಯಾಭ್ಯಾಸ ಇಲಾಖೆ ಏಕಪಕ್ಷೀಯವಾಗಿ ಪ್ರಕಟಿಸಿದ ಕ್ಯಾಲೆಂಡರನ್ನು ವಿರೋಧಿಸಿ ದೇಶೀಯ ಅಧ್ಯಾಪಕ ಪರಿಷತ್ ಎನ್.ಟಿ.ಯು ಮಂಜೇಶ್ವರ ಉಪಜಿಲ್ಲಾ ಸದಸ್ಯರು ಶನಿವಾರ ನಡೆದ ಕ್ಲಸ್ಟರ್ ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಎನ್.ಟಿ.ಯು ರಾಜ್ಯ ಸಮಿತಿ ಸದಸ್ಯ ಮಹಾಬಲ ಭಟ್ ಮಾತನಾಡಿ ಶಿಕ್ಷಣ ಹಕ್ಕು ಕಾಯಿದೆಯನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಪ್ರಕಟಿಸಿದ ಶೈಕ್ಷಣಿಕ ಕ್ಯಾಲೆಂಡರನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಸಮಿತಿ ಸದಸ್ಯ ಈಶ್ವರ ಕಿದೂರು, ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್,ರಾಜ್ಯ ವನಿತಾ ವಿಂಗ್ ಕಾರ್ಯದರ್ಶಿ ಸುಚಿತಾ ಟೀಚರ್, ಉಪಜಿಲ್ಲಾ ಕಾರ್ಯದರ್ಶಿ ದೇವಿಪ್ರಸಾದ್ ಹಾಗೂ ಮಂಜೇಶ್ವರ ಉಪಜಿಲ್ಲಾ ಎನ್. ಟಿ.ಯು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.