ನವದೆಹಲಿ: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದ 'ಸ್ಪೈಡರ್ ಮ್ಯಾನ್' ವೇಷಧಾರಿಯನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ನವದೆಹಲಿ: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದ 'ಸ್ಪೈಡರ್ ಮ್ಯಾನ್' ವೇಷಧಾರಿಯನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸ್ಪೈಡರ್ ಮ್ಯಾನ್ ವೇಷದಲ್ಲಿದ್ದ ವ್ಯಕ್ತಿಯನ್ನು ನಜಾಫ್‌ಗಢದ ಆದಿತ್ಯ (20) ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಕಾರಿನ ಮಾಲೀಕ ಮತ್ತು ಸ್ಪೈಡರ್ ಮ್ಯಾನ್ ವೇಷಧಾರಿ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀಟ್ ಬೆಲ್ಟ್ ಧರಿಸದೇ ಅಪಾಯಕಾರಿ ವಾಹನ ಚಾಲನೆ, ಮಾಲಿನ್ಯ ಪ್ರಮಾಣ ಪತ್ರ ಹೊಂದಿಲ್ಲದಿರುವುದಕ್ಕೆ ಕಾರಿನ ಚಾಲಕನಿಗೆ ₹26,000 ದಂಡ ವಿಧಿಸಲಾಗಿದೆ ಎಂದು 'ಎಎನ್‌ಐ' ವರದಿ ಮಾಡಿದೆ.
ಏಪ್ರಿಲ್‌ನಲ್ಲಿ ಸ್ಪೈಡರ್ ಮ್ಯಾನ್ ಮತ್ತು ಸ್ಪೈಡರ್ ವುಮನ್ ರೀತಿಯ ಉಡುಪು ಧರಿಸಿದ ದಂಪತಿಯು ಬೈಕ್‌ನಲ್ಲಿ 'ಟೈಟಾನಿಕ್ ಪೋಸ್' ನೀಡುವ ಮೂಲಕ ಸುದ್ದಿಯಾಗಿದ್ದರು. ದಂಪತಿ ವಿರುದ್ಧ ಪೊಲೀಸರು ಮೋಟಾರು ವಾಹನ (ಎಂವಿ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು.