ಕಾಸರಗೋಡು: ಕುವೈತ್‍ನಲ್ಲಿ ಬೆಂಕಿ ಆಕಸ್ಮಿಕದಲ್ಲಿ ಮೃತಪಟ್ಟ ದಕ್ಷಿಣ ತ್ರಿಕರಿಪುರ ತೆಕುಂಬಾಟ್ ನಿವಾಸಿ ಕೇಳು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಮಂಜೂರುಗೊಳಿಸಿದ ಪರಿಹಾರ ನಿಧಿಯನ್ನುನೋಂದಣಿ-ಪ್ರಾಚ್ಯವಸ್ತು ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಅವರು ತೆಂಕುಂಬಾಟ್‍ನ ಅವರ ನಿವಾಸಕ್ಕೆ ತೆರಳಿ ಹಸ್ತಾಂತರಿಸಿದರು.
ಕೇಳು ಅವರ ಪತ್ನಿ ಮಣಿ ಚೆಕ್ ಸವೀಕರಿಸಿದರು. ಶಾಸಕ ಎಂ.ರಾಜಗೋಪಾಲನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ತೃಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಬಾವಾ, ನಾರ್ಕಾ ರೂಟ್ಸ್ ಪ್ರಾದೇಶಿಕ ವ್ಯವಸ್ಥಾಪಕ ಸಿ.ರವೀಂದ್ರನಾಥ, ಹೊಸದುರ್ಗ ತಹಸೀಲ್ದಾರ್ ಎಂ.ಮಾಯಾ ಜತೆಗಿದ್ದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಾಗೂ ಎಂ.ಎ.ಯೂಸಫಲಿ ಅವರಿಂದ ತಲಾ 5ಲಕ್ಷ, ರವಿ ಪಿಳ್ಳೆ ಹಾಗೂ ಬಾಬು ಸ್ಟೆಫನ್ ಅವರು ನೀಡಿದ ತಲಾ 2 ಲಕ್ಷ ರೂ. ಸೇರಿದಂತೆ 14 ಲಕ್ಷ ರೂ.ಗಳ ಚೆಕ್ ಅನ್ನು ಸಚಿವರು ಹಸ್ತಾಂತರಿಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿಶೇಷ ಸೂಚನೆಯಂತೆ ಕುವೈತ್‍ನಲ್ಲಿ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಮನೆಗಳಿಗೆ ನೇರವಾಗಿ ಹಣ ಹಸ್ತಾಂತರಿಸಲಾಗಿದೆ ಎಂದು ಸಚಿವರು ತಿಳಿಸಿದರು.