ಮುಳ್ಳೇರಿಯ: ಬೋವಿಕ್ಕಾನ ಶಾಲೆಯಲ್ಲಿ ಸಮಾಜಘಾತುಕರು ಶಾಲಾ ವಿದ್ಯಾರ್ಥಿಗಳ ಪುಸ್ತಕಗಳನ್ನು ಸುಟ್ಟು ಹಾಕಿರುವ ಘಟನೆಯನ್ನು ಪೇರಡ್ಕ ಮಹಾತ್ಮಜಿ ಗ್ರಂಥಾಲಯ ಹಾಗೂ ವಾಚನಾಲಯ ಖಂಡಿಸಿದೆ.
ತಪ್ಪಿತಸ್ಥರನ್ನು ಆದಷ್ಟು ಶೀಘ್ರ ಗುರುತಿಸಿ ಶಿಕ್ಷೆಗೆ ಗುರಿಪಡಿಸಿ ಸಮಾಜಘಾತುಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ. ಗ್ರಂಥಾಲಯ-ವಾಚನಾಲಯದಲ್ಲಿ ನಡೆದ ಖಂಡನಾ ನೀರ್ಣಯ ಸಭೆಯಲ್ಲಿ ಗ್ರಂಥಾಲಯದ ಅಧ್ಯಕ್ಷ ರಘು ಕೆ.ವೈ. ಅಧ್ಯಕ್ಷತೆ ವಹಿಸಿದ್ದರು. ಕುಂಞÂ ರಾಮನ್, ಮಧುಸೂದನನ್ ಟಿ.ವಿ, ವಿನೋದ್ ಕುಮಾರ್ ಸಿ, ರವಿ ಪಾಂಡಿ, ರತೀಶ್ ಕೆ, ಸಾಜು ಟಿ, ವಿನೋದ್ ಕುಮಾರ್ ಟಿ.ವಿ, ಹನೀಫ್ ಕೆ.ಎಂ. ಗ್ರಂಥಾಲಯದ ಕಾರ್ಯದರ್ಶಿ ಸತ್ಯನ್ ಕೆ ಮತ್ತು ಗ್ರಂಥಪಾಲಕಿ ಜೀನಾ ಮಾತನಾಡಿದರು.