ಮಂಜೇಶ್ವರ: ಕಲಾ ಕ್ಷೇತ್ರದ ವಿವಿಧ ವಲಯಗಳ ಕಾರ್ಯಕರ್ತರ ಸಂಘಟನೆಯಾದ ಸವಾಕ್(ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ) ಮಂಜೇಶ್ವರ ವಲಯದ ಸಭೆ ಇಂದು (ಶುಕ್ರವಾರ) ಸಂಜೆ 5 ಕ್ಕೆ ಗಿಳಿವಿಂಡು ಸಮೀಪದ ಮಂಜೇಶ್ವರ ಕಲಾಸ್ಪರ್ಶಂ ಕಛೇರಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಸವಾಕ್ ಮಂಜೇಶ್ವರ ವಲಯದ ಸಮಾವೇಶದ ಕುರಿತು ಚರ್ಚೆ ನಡೆಯಲಿದೆ. ಹಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಸಂಬಂಧಪಟ್ಟವರು ವಿನಂತಿಸಿದ್ದಾರೆ.