ತಿರುವನಂತಪುರ: ಕೇರಳದ ಮುನ್ಸಿಪಲ್ ಸಂಸ್ಥೆಗಳ ಆದಾಯ ರಾಜ್ಯದ ಜಿಡಿಪಿಗೆ ಅನುಗುಣವಾಗಿ ಹೆಚ್ಚಾಗಬೇಕು ಎಂಬುದು ಕೇಂದ್ರ ಹಣಕಾಸು ಆಯೋಗದ ಅಗತ್ಯವಾಗಿದ್ದು, ಅದಕ್ಕಾಗಿಯೇ ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕವನ್ನು ಇಪ್ಪತ್ತು ಶೇ. ಹೆಚ್ಚಿಸಲಾಗಿದೆ ಎಂದು ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ವಿಚಿತ್ರ ಸಮರ್ಥನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಚಿವರು ಮಾತನಾಡಿ, ಸರ್ಕಾರ ಸಾರ್ವಜನಿಕರ ಸುಲಿಗೆ ಮಾಡುತ್ತಿದೆ ಎಂಬ ಟೀಕೆಗೆ ಪ್ರತಿಕ್ರಿಯೆಯಾಗಿ ಮಾತನಾಡಿದರು.
ಕೇಂದ್ರದ ನಿರ್ದೇಶನದಂತೆ ನಡೆದುಕೊಳ್ಳುತ್ತಿರುವುದಾಗಿ ಕಪೋಲಕಲ್ಪಿತ ಪ್ರತಿಕ್ರಿಯೆ ನೀಡಿದರು. ನಗರಸಭೆಗಳ ಆದಾಯದ ಮಟ್ಟವನ್ನು ಸಾಧಿಸದ ಕಾರಣ ೨೪ ನಗರಸಭೆಗಳು ಹಣಕಾಸು ಆಯೋಗದ ಅನುದಾನವನ್ನು ಕಳೆದುಕೊಂಡಿವೆ ಎಂದು ಸಚಿವರು ಹೇಳಿದರು. ಆದರೆ ಸಂಕಷ್ಟದಲ್ಲಿರುವ ನಗರಸಭೆಗಳನ್ನು ಇದ್ದ ಶುಲ್ಕಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚಿಸಿ ಹಗಲು ದರೋಡೆ ಮಾಡಲು ಕೇಂದ್ರ ಹಣಕಾಸು ಆಯೋಗ ಮುಂದಾಗಿದೆ ಎಂದು ಹೇಳುವ ಮೂಲಕ ಸಚಿವರು ಅನುಕೂಲಕರವಾಗಿ ರಾಜ್ಯದ vಪ್ಪುಗಳನ್ನು ಮರೆಮಾಚಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ಸ್ವಂತ ಆದಾಯವನ್ನು ಹೆಚ್ಚಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಯಿತು, ಆದರೆ ಜನರನ್ನು ಲೂಟಿ ಮಾಡಬಾರದು. ಸಂಗ್ರಹಿಸಲಾಗದ ತೆರಿಗೆಗಳನ್ನು ಕಠಿಣ ನಿಲುವುಗಳ ಮೂಲಕ ಸಂಗ್ರಹಿಸುವುದು ಮತ್ತು ಆದಾಯವನ್ನು ಹೆಚ್ಚಿಸುವ ಇತರ ಮಾರ್ಗಗಳನ್ನು ಪತ್ತೆಮಾಡಲು ಪ್ರಯತ್ನಗಳು ಸಾಗಿವೆ. ಈ ಬಗ್ಗೆ ಸಿಎಜಿ ಮತ್ತು ರಾಜ್ಯ ಹಣಕಾಸು ಆಯೋಗ ನಿರಂತರವಾಗಿ ಮನವಿ ಮಾಡಿರುವುದನ್ನು ಸ್ವತಃ ಸಚಿವರೂ ಒಪ್ಪಿಕೊಂಡಿದ್ದಾರೆ.