ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರು ಶನಿವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರು ಶನಿವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾದ ಇಬ್ಬರು ನಕ್ಸಲರ ತಲೆಯ ಮೇಲೆ ₹3 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಆದಿವಾಸಿಗಳ ಮೇಲೆ ಮಾವೋವಾದಿಗಳು ನಡೆಸಿದ ದೌರ್ಜನ್ಯಗಳು ಮತ್ತು ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡ ಇವರು ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೇ ರಾಜ್ಯಸರ್ಕಾರದ ನಕ್ಸಲಿಸಂ ನಿರ್ಮೂಲನ ನೀತಿ ಮತ್ತು ಸುಕ್ಮಾ ಪೊಲೀಸರ ಪುನರ್ವಸತಿ ಯೋಜನೆಯಿಂದ ಪ್ರೇರಣೆಗೊಂಡು ಇವರು ಶರಣಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಶರಣಾದವರಲ್ಲಿ ಕರ್ತಮ್ ಸುಕ್ಕಾ ಅಲಿಯಾಸ್ ಹದ್ಮಾ ಎಂಬಾತನ ತನ್ನ ತಲೆಗೆ ₹2 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಸಿಯಾಮ್ ಬದ್ರಾ ಎಂಬಾತನ ತನ್ನ ತಲೆಗೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಶರಣಾದ ನಕ್ಸಲರು ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಯೋಜನೆಯಡಿ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.