ನವದೆಹಲಿ: ಬಿಆರ್‌ಎಸ್ ಪಕ್ಷದ ರಾಜ್ಯಸಭೆ ಸದಸ್ಯ ಕೇಶವ ರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನವದೆಹಲಿ: ಬಿಆರ್‌ಎಸ್ ಪಕ್ಷದ ರಾಜ್ಯಸಭೆ ಸದಸ್ಯ ಕೇಶವ ರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದರು. ಇಂದು ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಉಪರಾಷ್ಟ್ರಪತಿ ಕಚೇರಿ ಮೂಲಗಳು ತಿಳಿಸಿವೆ.
ಕೇಶವ ರಾವ್ ಅವರು ಬುಧವಾರ ಬಿಆರ್‌ಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ಕೇಶವ ರಾವ್ ಅವರು 2020ರಿಂದ ತೆಲಂಗಾಣದಿಂದ ರಾಜ್ಯಸಭೆ ಸದಸ್ಯರಾಗಿದ್ದರು. ಕೇಶವ ರಾವ್ ಅವರ ರಾಜೀನಾಮೆಯಿಂದ ರಾಜ್ಯಸಭೆಯಲ್ಲಿ ಒಟ್ಟು 16 ಸ್ಥಾನಗಳು ಖಾಲಿ ಉಳಿದಿವೆ.
ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ಮಹಾರಾಷ್ಟ್ರದಿಂದ ಮೂರು, ಅಸ್ಸಾಂ ಮತ್ತು ಬಿಹಾರದಿಂದ ತಲಾ ಎರಡು, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರಾ, ತೆಲಂಗಾಣದಿಂದ ತಲಾ ಒಂದು ಸ್ಥಾನ ಸೇರಿದಂತೆ 16 ಸ್ಥಾನಗಳು ಖಾಲಿ ಇವೆ.