ಕುಂಬಳೆ: : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶ್ರೀಗುರುನಮನ ಕಾರ್ಯಕ್ರಮ ಜರಗಿತು. ರಾಮಾಯಣ ಮಾಸಾಚರಣೆಯ ನಿತ್ಯ ರಾಮಕಥೆಯನ್ನು ಸಂಸ್ಕೃತ ಅಧ್ಯಾಪಕ ಬಾಲಕೃಷ್ಣ ಶರ್ಮ ನೆರವೇರಿಸಿದರು. ಮುಖ್ಯ ಅಧ್ಯಾಪಕ ಶ್ಯಾಂ ಭಟ್ ದರ್ಭೆಮಾರ್ಗ ಅವರು ಮಾತನಾಡಿ ಶಂಕರಾಚಾರ್ಯ ಪೀಠದ ಪರಂಪರೆಯ ಕುರಿತು ವಿವರಿಸಿದರು. ಅಧ್ಯಾಪಕ ಸಮೂಹ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶ್ರೀಗುರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಗುರುನಮದ ಕಾರ್ಯಕ್ರಮ ಜರಗಿತು.