ನವದೆಹಲಿ: ಮಳೆ ದುರಂತ ಸಾಧ್ಯತೆಯ ಬಗ್ಗೆ ಕೇರಳಕ್ಕೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ವಯನಾಡಿನಲ್ಲಿ ದುರಂತ ಸಂಭವಿಸುವ ಏಳು ದಿನಗಳ ಮೊದಲು, ಪದೇ ಪದೇ ಪ್ರವಾಹದ ಎಚ್ಚರಿಕೆಗಳನ್ನು ನೀಡಲಾಗಿತ್ತು ಎಂದು ವಿಶದಪಡಿಸಿದರು.
ಒಂದು ವಾರದ ಹಿಂದೆ ಎನ್‌ಡಿಆರ್‌ಎಫ್ ತಂಡವನ್ನು ಕಳುಹಿಸಲಾಗಿದ್ದು, ಕೇಂದ್ರ ವಿಫಲವಾಗಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಬಳಿಕ ಅಮಿತ್ ಶಾ ಈ ಬಗ್ಗೆ ವಿವರಿಸಿದರು. ''ದೇಶದ ಜನತೆಗೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ಹಿಂದೆ ಯಾವುದೇ ಎಚ್ಚರಿಕೆ ನೀಡಿರಲಿಲ್ಲ ಎಂಬ ಕಾಮೆಂಟ್‌ಗಳಿವೆ. ಕೇಂದ್ರ ಸರ್ಕಾರ ಜುಲೈ 23 ರಂದು ಕೇರಳ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಇದು ದುರಂತದ ಏಳು ದಿನಗಳ ಮೊದಲು ಎಂಬುದನ್ನು ಗಮನಿಸಬೇಕು. 24 ಮತ್ತು 25ರಂದು ಭಾರೀ ಮಳೆಯಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದ್ದು, 2014 ರಿಂದ ಇಲ್ಲಿಯವರೆಗೆ 2000 ಕೋಟಿ ರೂ.ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಳಸಲಾಗಿದೆ ಎಂದು ಅವರು ಅಂಕಿಅAಶ ಸಹಿತ ವಿವರಿಸಿದರು.
ಕೇಂದ್ರ ಸರ್ಕಾರ ವಿಫಲವಾಗಿದ್ದು, ನಿಖರ ಹವಾಮಾನ ಎಚ್ಚರಿಕೆ ನೀಡಿಲ್ಲ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಅಮಿತ್ ಶಾ ಈ ಬಗ್ಗೆ ವಿವರಿಸಿದರು. ಒಂದು ವಾರದ ಹಿಂದೆಯೇ ಭೂಕುಸಿತ ಸಂಭವಿಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದಾಗ ರಾಜ್ಯ ಸರ್ಕಾರವು ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಮಿತ್ ಶಾ ಕೇಳಿದರು. ಭೂಕುಸಿತ ಸಂಭವಿಸುವ ಸಾಧ್ಯತೆಯಿರುವುದರಿಂದ ಕೇಂದ್ರ ಗೃಹ ಸಚಿವಾಲಯವು 9 ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳಕ್ಕೆ ಕಳುಹಿಸಿತ್ತು. ಕೇರಳ ಸರ್ಕಾರ ಏನು ಮಾಡಿದೆ? ಜನರು ಸ್ಥಳಾಂತರಗೊAಡಿದ್ದಾರೆಯೇ? ಅವರನ್ನು ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರಿಸಿದ್ದರೆ ಇಷ್ಟೊಂದು ಸಾವು ಹೇಗೆ ¸ಂಭವಿಸುತ್ತಿತ್ತು ಎಂಬ ಪ್ರಶ್ನೆಯನ್ನೂ ಗೃಹ ಸಚಿವರು ಎತ್ತಿದರು. ಭಾರತದಲ್ಲಿ 2016 ರ ವರೆಗಿದ್ದ ಹಳೆಯ ಎಚ್ಚರಿಕೆ ವ್ಯವಸ್ಥೆಯು 2023 ರ ವೇಳೆಗೆ ಅತ್ಯಾಧುನಿಕತೆಯನ್ನು ತಲುಪಿತ್ತು. ಪ್ರವಾಹ, ಭೂಕುಸಿತ ಮತ್ತು ಇತರ ಪ್ರಕೃತಿ ವಿಕೋಪÀದಂತಹ ಅನಾಹುತಗಳ ಸಾಧ್ಯತೆಯನ್ನು 7 ದಿನ ಮುಂಚಿತವಾಗಿ ಊಹಿಸಲು ಜಗತ್ತಿನಲ್ಲಿ ಕೇವಲ 4 ದೇಶಗಳಿದ್ದು, ಅದರಲ್ಲಿ ಭಾರತವೂ ಒಂದು ಎಂದು ಅಮಿತ್ ಶಾ ಹೇಳಿದ್ದಾರೆ.
ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಚುರಲ್ಮಲಾ ಮತ್ತು ಮುಂಡಕೈ ಪ್ರದೇಶಗಳಲ್ಲಿ ಭೂ, ವಾಯು ಮತ್ತು ನೌಕಾ ಪಡೆಗಳ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇದುವರೆಗೆ 177 ಸಾವುಗಳು ದೃಢಪಟ್ಟಿವೆ.