ಸಮರಸ ಚಿತ್ರಸುದ್ದಿ: ಕಾಸರಗೋಡು: ಪೆರಿಯದ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಲೋತ್ಸವದ ಅಂಗವಾಗಿ ವರ್ಣರಂಜಿತ ಮೆರವಣಿಗೆ ನಡೆಯಿತು. ವೈಸ್ ಚಾನ್ಸಲರ್ ಇನ್ ಚಾರ್ಜ್ ಪ್ರೊ. ವಿನ್ಸೆಂಟ್ ಮ್ಯಾಥ್ಯೂ ಉದ್ಘಾಟಿಸಿದರು. ಸ್ಟುಡೆಂಟ್ಸ್ ವೆಲ್ಪೇರ್ ಡೀನ್ ಪ್ರೊ.ರಾಜೇಂದ್ರ ಪಿಲಾಂಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಡಾ.ಎಂ.ಮುರಳೀಧರನ್ ನಂಬ್ಯಾರ್ ಶುಭಹಾರೈಸಿದರು. ಸ್ಟುಡೆಂಟ್ಸ್ ಕೌನ್ಸಿಲ್ ಅಧ್ಯಕ್ಷ ಎ.ಶ್ರೀಹರಿ ಸ್ವಾಗತಿಸಿದರು. ಕಾರ್ಯದರ್ಶಿ ಅಮರ್ ಶ್ಯಾಂ ವಂದಿಸಿದರು.