HEALTH TIPS

ಮಾಧ್ಯಮಗಳ ಕುಟುಕು ಕಾರ್ಯಾಚರಣೆಯನ್ನು ಸದುದ್ದೇಶದಿಂದ ನಡೆಸಿದರೆ ಅದಕ್ಕೆ ಕಾನೂನಿನ ರಕ್ಷಣೆ ಇರುತ್ತದೆ: ಹೈಕೋರ್ಟ್

                ಕೊಚ್ಚಿ: ಮಾಧ್ಯಮಗಳು ಸತ್ಯವನ್ನು ವರದಿ ಮಾಡುವ ಸದುದ್ದೇಶದಿಂದ ಕುಟುಕು ಕಾರ್ಯಾಚರಣೆ ನಡೆಸಿದರೆ ಕಾನೂನಿನ ರಕ್ಷಣೆ ಇರುತ್ತದೆ ಎಂದು ಹೈಕೋರ್ಟ್ ಹೇಳಿದೆ.

              ಆದರೆ ಯಾರನ್ನಾದರೂ ವೈಯಕ್ತಿಕವಾಗಿ ಮಾನಹಾನಿಗೊಳಿಸುವ ಕುತ್ಸಿತ ಉದ್ದೇಶದಿಂದ ನಡೆಸಿದ ಕಾರ್ಯಾಚರಣೆಗಳಿಗೆ ಈ ಪರಿಗಣನೆ ಸಿಗುವುದಿಲ್ಲ ಮತ್ತು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಪಿವಿ ಕುಂಞÂ ಕಣ್ಣನ್ ಹೇಳಿದ್ದಾರೆ.

              ಪತ್ತನಂತಿಟ್ಟ ಜೈಲಿನಲ್ಲಿ ಸೋಲಾರ್ ಪ್ರಕರಣದ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಯತ್ನಿಸಿದ ಸುದ್ದಿ ವಾಹಿನಿ ವರದಿಗಾರರ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯದ ಈ ಅವಲೋಕನ ನಡೆಸಿದೆ. 

              ಪ್ರತಿ ಪ್ರಕರಣದ ಸತ್ಯಗಳ ಆಧಾರದ ಮೇಲೆ ಇದನ್ನು ನಿರ್ಧರಿಸಬಹುದು. ಹಾಗಾಗಿ ಮಾಧ್ಯಮ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ಪತ್ರಿಕಾ ಸ್ವಾತಂತ್ರ್ಯ ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವದ ಅಂತ್ಯ. ಆದರೆ ಈ ವಿಚಾರದಲ್ಲಿ ಸಣ್ಣ ತಪ್ಪಾದರೂ ಖಾಸಗಿತನ ಮತ್ತು ಸಾಂವಿಧಾನಿಕ ಹಕ್ಕುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.ಇದು ಕೂಡದು ಎಂದು ನ್ಯಾಯಾಲಯ ಹೇಳಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries