HEALTH TIPS

ಮಲಗಿದ್ದವರ ಕನಸನ್ನೇ ಕಸಿದ ಭೂಕುಸಿತ ಭೂತ: ಖಾಲಿಯಾದ ಗ್ರಾಮಗಳು: ಕಣ್ಣೀರ ಕಡಲಾದ ವಯನಾಡ್ ಘಟನೆ

                ಕಲ್ಪಟ್ಟ: ದೇಶವನ್ನೇ ಬೆಚ್ಚಿಬೀಳಿಸಿರುವ ಸುದ್ದಿ ಕೇರಳದ ವಯನಾಡಿನ ದುರಂತ. ಮಂಗಳವಾರ ಬೆಳ್ಳಂಬೆಳಗ್ಗೆ ದೊಡ್ಡ ಪ್ರದೇಶವೊಂದು ಕುಸಿದು ಇನ್ನಿಲ್ಲವಾದ ದೃಶ್ಯ ಕೇರಳಕ್ಕೆ ಅಕ್ಷರಶಃ ಭಯ ಹುಟ್ಟಿಸಿತ್ತು.

                ವಯನಾಡಿನ ಮುಂಡಕೈ, ಅಕಮಲ ಮತ್ತು ಚುರಲ್ ಮಾಲಾ ಪ್ರದೇಶಗಳಲ್ಲಿ ಮುಂಜಾನೆ ೨ ಗಂಟೆ ಸುಮಾರಿಗೆ ಸಂಭವಿಸಿದ ಭೂಕುಸಿತದಲ್ಲಿ ಹಲವರು ಕೆಸರು ಮತ್ತು ಮಣ್ಣಿನಲ್ಲಿ ಹೂತು ಹೋಗಿದ್ದಾರೆ. ಮನೆಗಳಲ್ಲಿ ಮಲಗಿದ್ದ ಅನೇಕರು ಕಿಲೋಮೀಟರ್ ದೂರದಿಂದ ಶವಗಳಾಗಿ ಪತ್ತೆಯಾಗಿರುವುದು ದುರಂತದ ಪ್ರಮಾಣವನ್ನು ವಿವರಿಸುತ್ತದೆ.

                ಗಾಯಗೊಂಡು ಆಸ್ಪತ್ರೆಗಳಲ್ಲಿ ದಾಖಲಾಗಿರುವ ಅನೇಕರಿಗೆ ತಮ್ಮ ಪ್ರೀತಿಪಾತ್ರರು ಎಲ್ಲಿದ್ದಾರೆ ಎಂಬುದೇ ತಿಳಿಯದೆ ಕಂಗೆಟ್ಟಿರುವ ದೃಸ್ಯ ಕರುಣಾಜನಕವಾಗಿತ್ತು. ರಾತ್ರಿ ಮಲಗಿದ್ದವರೆಲ್ಲ ಮಲೆನಾಡಿನ ಪ್ರವಾಹಕ್ಕೆ ಸಿಲುಕಿ ಚದುರಿ ಹೋದರು. ಮಧ್ಯರಾತ್ರಿ ಸಂಭವಿಸಿದ ಅನಾಹುತದಲ್ಲಿ ನೂರಾರು ಜನರು ಕೊಚ್ಚಿ ಹೋಗಿದ್ದಾರೆ. ಇನ್ನೂ ಹಲವರು ಭೂಗರ್ಭದಲ್ಲಿ ಸಿಲುಕಿಕೊಂಡಿದ್ದಾರೆ.

              ಎರಡ್ಮೂರು ಬಾರಿ ನಿಮಿಷಗಳ ವ್ಯತ್ಯಾಸದಲ್ಲಿ ಹಲವು ಜೀವಗಳು, ಪ್ರಾಣಗಳು ಕೊಚ್ಚಿ ಹೋದವು. ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹೊರ ಬರುವಷ್ಟರಲ್ಲಿ ಮನೆ ಕೊಚ್ಚಿಕೊಂಡು ಹೋಗಿತ್ತು’ ಎಂದು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಯುವಕ, ಕಣ್ಣೆದುರೇ ಐವರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು. ಉಳಿಸಲಾಗಲಿಲ್ಲ. ಕಾಣೆಯಾದವರನ್ನು ಹುಡುಕಲು ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಸಂಬAಧಿಕರು ವಿಪತ್ತು ಪ್ರದೇಶ ಮತ್ತು ಆಸ್ಪತ್ರೆಯ ಬಾಲ್ಕನಿಗಳಲ್ಲಿ ಅಲೆದಾಡುತ್ತಿರುವುದು ಕಂಡುಬರುತ್ತದೆ.

             ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜನರು ತಮ್ಮ ಪ್ರೀತಿಪಾತ್ರರನ್ನು ಹುಡುಕಲು ವಯನಾಡಿನ ವಿವಿಧ ಆರೋಗ್ಯ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ. ಬಹುತೇಕ ಮೃತದೇಹಗಳನ್ನು ಮೆಪ್ಪಾಡಿ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ. ಇಲ್ಲಿಗೆ ತರಲಾದ ೩೫ ಮೃತದೇಹಗಳ ಪೈಕಿ ೧೦ ಮೃತದೇಹಗಳನ್ನು ಮಾತ್ರ ಗುರುತಿಸಲಾಗಿದೆ. ಮಲಪ್ಪುರಂ ಗಡಿಯ ಪೋತುಕಲ್‌ನಿಂದ ಹಲವು ಮೃತದೇಹಗಳು ಪತ್ತೆಯಾಗಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries