ಮಂಜೇಶ್ವರ: ‘ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್(ರಿ) ಮುಡಿಪು’ ಇದರ ರಜತ ಸಂಭ್ರಮ ಪ್ರಯುಕ್ತ ರಾಮಾಯಣ ದಶಪರ್ವ ಸರಣಿ ತಾಳಮದ್ದಳೆ ಕೂಟ ಬಿ ಸಿ ರೋಡ್ ನ ತುಳು ಶಿವಳ್ಳಿ ಸಭಾ ಭವನದಲ್ಲಿ ನಡೆಯುತ್ತಿದ್ದು ‘ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು’ ತಂಡದ ಅತಿಕಾಯ ಕಾಳಗ ಯಕ್ಷಾನ ತಾಳಮದ್ದಳೆ ಇತ್ತೀಚೆಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರು ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ನವೀನ ಚಂದ್ರ ಮೊಗರ್ನಾಡು, ಶ್ರೀವತ್ಸ ಸೋಮಯಾಜಿ ಬಂಟ್ವಾಳ ಭಾಗವಹಿಸಿದ್ದು ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ವೇದಮೂರ್ತಿ ಗಣೇಶ ನಾವಡ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ವೇದಮೂರ್ತಿ ಹರಿನಾರಾಯಣ ಮಯ್ಯ ಬಜೆ, ನಾಗರಾಜ ಪದಕಣ್ಣಾಯ ಮೂಡಂಬೈಲು, ಶಿವರಾಮ ಪ್ರಸಾದ ಮಯ್ಯ ಮಲೆಂದೂರು, ಸಾಯಿಸುಮಾ ನಾವಡ ಭಾಗವಹಿಸಿದ್ದರು.