HEALTH TIPS

ಧರ್ಮತ್ತಡ್ಕ ಶಾಲೆಯಲ್ಲಿ ಲಿಟ್ಲ್ ಕೈಟ್ಸ್ ಪ್ರಿಲಿಮಿನರಿ ತರಗತಿ

               ಕುಂಬಳೆ: ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಲಿಟ್ಲ್ ಕೈಟ್ಸ್ ನ ೮ನೇ ತರಗತಿ ವಿಭಾಗದ ಮಕ್ಕಳಿಗೆ ಒಂದು ದಿನದ ಪ್ರಿಲಿಮಿನರಿ ತರಗತಿ ನಡೆಯಿತು.


               ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಜೇಶ್ವರ ಉಪಜಿಲ್ಲಾ ಕೈಟ್  ಸಂಯೋಜಕ ಮತ್ತು ಮಾಸ್ಟರ್ ಟ್ರೈನರ್ ಪ್ರಿಯ ಸಿ ಯಚ್ ಅವರು ತರಗತಿ ನಡೆಸಿದರು. ಮುಖ್ಯೋಪಾಧ್ಯಾಯ ಇ.ಎಚ್. ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.


                ಶಶಿಕುಮಾರ್ ಶುಭಾಶಂಸನೆಗೈದರು. ಲಿಟ್ಲ್ ಕೈಟ್ ಮಾಸ್ಟರ್ ಪ್ರದೀಪ್ ಸ್ವಾಗತಿಸಿ, ಲಿಟ್ಲ್ ಕೈಟ್ ಮಿಸ್ಟ್ರೆಸ್ ಸೌಮ್ಯ ವಂದಿಸಿದರು. ತರಗತಿಯಲ್ಲಿ ಲಿಟ್ಲ್ ಕೈಟ್ಸ್ ಉದ್ದೇಶ ಮತ್ತು ಅದರ ಪ್ರಯೋಜನವನ್ನು ಸವಿವರವಾಗಿ ಪ್ರಿಯ ತಿಳಿಸಿಕೊಟ್ಟರು. ಮಕ್ಕಳನ್ನು ಗುಂಪುಗಳಾಗಿ ರಚಿಸಿ ವಿವಿಧ ರೀತಿಯ ನೂತನ ಆಟ, ಆನಿಮೇಷನ್ , ಸ್ಕ್ರಾಚ್ , ರೋಬೋಟಿಕ್ಸ್ ಇತ್ಯಾದಿಗಳನ್ನು ತಿಳಿಸಿಕೊಡಲಾಯಿತು. ರಕ್ಷಕರು ತರಗತಿಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries