ಕಾಸರಗೋಡು: ವಿವಾಹ ವಿಚ್ಛೇದನ ಕುರಿತು ದೂರು ನೀಡಲು ಆಗಮಿಸಿದ ಸಂದರ್ಭ ನ್ಯಾಯವಾದಿಯೋರ್ವ ಕಿರುಕುಳ ನೀಡಿದನೆಂದು ಮಹಿಳೆಯು ನೀಡಿದ ದೂರಿನ ಕುರಿತು ತನಿಖೆ ನಡೆಸಲು ಕಾಸರಗೋಡು ಬಾರ್ ಅಸೋಸಿಯೇಶನ್ 7 ಮಂದಿ ಸದಸ್ಯರುಳ್ಳ ಸಮಿತಿಯನ್ನು ನೇಮಿಸಿದೆ. ಈ ಬಗ್ಗೆ ಜರಗಿದ ತುರ್ತು ಸಭೆಯಲ್ಲಿ ಸಮಿತಿ ರೂಪಿಸಲಾಗಿದೆ.
ನ್ಯಾಯವಾದಿ ಎ.ಗೋಪಾಲನ್ ನಾಯರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ನ್ಯಾಯವಾದಿಗಳಾದ ಪಿ.ಪಿ.ಶ್ಯಾಮಲಾದೇವಿ, ಕುಸುಮಾ, ವಿನೋದ್, ಸಖೀರ್, ಎ.ಎನ್.ಅಶೋಕ್‍ಕುಮಾರ್ ಮೊದಲಾದವರು ಸಮಿತಿಯ ಸದಸ್ಯರಾಗಿದ್ದಾರೆ.
ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕೆಂದು ನಿರ್ದೇಶಿಸಲಾಗಿದೆ. ಬಾರ್ ಅಸೋಸಿಯೇಶನ್‍ಗೆ ಮಹಿಳೆಯು ದೂರು ನೀಡಿದ ಹಿನ್ನೆಲೆಯಲ್ಲಿ ಅಸೋಸಿಯೇಶನ್ ಸ`É ನಡೆಸಿ ಪ್ರತಿವಾದಿಯಿಂದ ಸ್ಪಷ್ಟೀಕರಣ ಕೇಳಲು ಪ್ರಯತ್ನಿಸಿತ್ತು.