ತಿರುವನಂತಪುರ: ಅಲ್ಪ ಬಿಡುವಿನ ಬಳಿಕ ರಾಜ್ಯದಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದೆ. ಎಲ್ಲಾ ೧೨ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಘೋಷಿಸಲಾಗಿದೆ.
ಪಾಲಕ್ಕಾಡ್ ಮತ್ತು ತಿರುವನಂತಪುರA ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ೫ ದಿನಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದೆ. ಕೋಝಿಕ್ಕೋಡ್ ಗುಡ್ಡಗಾಡು ಪ್ರದೇಶ ಮತ್ತು ವಯನಾಡಿನ ಮೆಪ್ಪಾಡಿಯಲ್ಲಿ ಭಾರೀ ಮಳೆ ಮುಂದುವರಿದಿದೆ.
ಗಂಟೆಗೆ ೪೦ ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಕೇರಳ ಕರಾವಳಿಯಲ್ಲಿ ಮೀನುಗಾರಿಕೆಗೂ ನಿಷೇಧ ಮುಂದುವರಿಯಲಿದೆ. ಭಾರೀ ಮಳೆಯಿಂದಾಗಿ ವಯನಾಡು ಜಿಲ್ಲೆಯ ೩ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಭೂಕುಸಿತ ಒಳಗಾಗುವ ಗುಡ್ಡಗಾಡು ಪ್ರದೇಶಗಳಲ್ಲಿನ ಶಾಲೆಗಳಿಗೆ ರಜೆ ನೀಡಲಾಯಿತು. ವೆಲ್ಲರ್ಮಲಾ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆ, ಪುತ್ತುಮಲ ಯುಪಿ ಶಾಲೆ ಮತ್ತು ಮುಂಡಕೈ ಯುಪಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು.
ಉತ್ತರ ಛತ್ತೀಸ್‌ಗಢದ ಮೇಲೆ ಚಂಡಮಾರುತ ಮತ್ತು ಉತ್ತರ ಕೇರಳ ಕರಾವಳಿಯಿಂದ ದಕ್ಷಿಣ ಗುಜರಾತ್ ಕರಾವಳಿಯವರೆಗೆ ಕಡಿಮೆ ಒತ್ತಡದ ಟ್ರಫ್ ವಿಸ್ತರಿಸಿರುವ ಪರಿಣಾಮವಾಗಿ ರಾಜ್ಯದಲ್ಲಿ ಮಳೆ ಬಿರುಸುಗೊಂಡಿದೆ.
ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲೂ ಮಳೆಯ ಅಬ್ಬರ ತೀವ್ರವಾಗಿದೆ. ತಾಮರಸ್ಸೆರಿ ಅಂಬಾಯತ್ ಬಳಿ ಮನೆಗಳ ಮೇಲೆ ಮರ ಬಿದ್ದು ಸುಮಾರು ೭ ಮನೆಗಳು ಹಾನಿಗೊಂಡಿದೆ. ಯಾವುದೇ ಗಾಯಗಳು ವರದಿಯಾಗಿಲ್ಲ. ವಯನಾಡಿನ ವೆಲಾರಿಮಲದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮುಂಡಕೈ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇಡುಕ್ಕಿ, ಎರ್ನಾಕುಳಂ ಮತ್ತು ತಿರುವನಂತಪುರAನಲ್ಲಿ ಬೆಳಗ್ಗೆಯಿಂದಲೇ ಮಳೆ ಜೋರಾಗಿತ್ತು. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.