ಮಂಜೇಶ್ವರ: ಕೊಡ್ಲಮೊಗರು ಗ್ರಾಮದ ಆಡೆಕಳ ತುಪ್ಪೆ ನಿವಾಸಿ ರತ್ನಾವತಿ ಶೆಟ್ಟಿ ಅವರ ಮನೆ ತೀವ್ರ ಮಳೆಯಿಂದಾಗಿ ಮನೆಯ ಮಾಡು ಕುಸಿದು ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಪಾರಾಗಿದ್ದಾರೆ. ಸಂತೋಷ್ ಮತ್ತು ಅವರ ತಾಯಿಯನ್ನು ಇದೀಗ ಹತ್ತಿರದ ಬಾಡಿಗೆ ಮನೆಗೆ ಸ್ಥಳಂತರಿಸಲಾಗಿದೆ. ಇವರು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದು ಈ ಅನಾಹುತದಿಂದ ಕಂಗಳಾಗಿದ್ದರೆ. ಸಂಕಷ್ಟದಲ್ಲಿರುವ ಇವರಿಗೆ ಇದೀಗ ನೆರವಿನ ಹಸ್ತ ಬೇಕಾಗಿದೆ.
ಇವರ ನೆರವಿಗಾಗಿ ಬಂಟರ ಸಂಘ ವರ್ಕಾಡಿ ವಲಯ ಮುಂದಾಗಿದ್ದು ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ನೆರವು ನೀಡುವಂತೆ ವಿನಂತಿಸಿದೆ. ಕೆಳಗೆ ನೀಡಲಾದ ಅಕೌಂಟ್ ನಂಬ್ರಕ್ಕೆ ನೆರವು ನೀಡುವಂತೆ ವಿನಂತಿಸಲಾಗಿದೆ. ಈ ಅಕೌಂಟ್ ನಂಬರ್ ಬಂಟರ ಸಂಘ ವರ್ಕಾಡಿ ವಲಯದ ಅಧಿಕೃತ ಖಾತೆಯಾಗಿದೆ. ಸಮಾಜದ ಸದಸ್ಯರಿಂದ ಹಣ ಸಂಗ್ರಹಿಸಿ ಒಟ್ಟು ಮೊತ್ತವನ್ನು ಆ ಕುಟುಂಬದ ಮನೆ ಪುನರ್ ನಿರ್ಮಾಣಕ್ಕೆ ಬಳಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದೆ. ದಾನಿಗಳ ನಿರೀಕ್ಷೆಯಲ್ಲಿದ್ದು, ಈ ಕುಟುಂಬಕ್ಕೆ ನೆರವಾಗೋಣ.
Bank
of Baroda
Ac
Name BUNTARA YAANE NADAVARA SANGHA VORKADY
Ac:
68610100004267
IFSC
: BARB0VJSKAT
BRANCH: Sunkadakatte