ಕಾಸರಗೋಡು: ಚೀಮೇನಿ ತೆರೆದ ಕಾರಾಗೃಹ ಸನಿಹದ ನಿವಾಸಿ ಪದ್ಮನಾಭನ್ ಎಂಬವರ ಮನೆಗೆ ಗುಂಡುಹಾರಿಸಿದ ಪರಿಣಾಮ ಮನೆಯ ಕಿಟಿಕಿ ಬಾಗಿಲಿಗೆ ಹಾನಿಯುಂಟಾಗಿದೆ. ರಾಜ್ಯ ತೋಟಗಾರಿಕಾ ನಿಗಮದ ಚೀಮೇನಿ ಎಸ್ಟೇಟ್ ಸನಿಹ ಇವರ ಮನೆ ಹೊಂದಿದ್ದು, ಈ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಕಾಡುಹಂದಿ, ಮೊಲ, ಮುಳ್ಳುಹಂದಿ, ಜಿಂಕೆ ಸುತ್ತಾಡುತ್ತಿದ್ದು, ಇವುಗಳ ಬೇಟೆಯಾಡುವವರು ಸಿಡಿಸಿದ ಗುಂಡು ಆಯತಪ್ಪಿ ಮನೆಗೆ ಬಡಿದಿರಬೇಕೆಂದು ಸಂಶಯಿಸಲಾಗಿದೆ. ಸ್ಥಳಕ್ಕೆ ಫೋರೆನ್ಸಿಕ್ ತಂಡ ಭೇಟಿನೀಡಿ, ಚದುರಿದ್ದ ಮದ್ದುಗುಂಡು ವಶಕ್ಕೆ ತೆಗೆದುಕೊಂಡಿದ್ದಾರೆ. ನಾಡಕೋವಿ ಬಳಸಿ ಗುಂಡು ಹಾರಿಸಿರುವುದಗಿ ಪತ್ತೆಹಚ್ಚಲಾಗಿದೆ. ಬೇಟೆ ತಂಡದವನ್ನು ಕೇಂದ್ರೀಕರಿಸಿ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.