ಮುಖಕ್ಕೆ ನಗುವೇ ಭೂಷಣ. ಅದರಲ್ಲೂ ಬೆಳ್ಳನೆಯ ಚೆಂದದ, ದಾಳಿಂಬೆ ಪೂಣಿಸಿದಂತಹ ಹಲ್ಲುಗಳಿರುವವರ ನಗುವಂತೂ ಬಲು ಸುಂದರ. ಆದರೆ, ನಮಗೆ ವಯಸ್ಸಾದಂತೆ, ವಿವಿಧ ಆಹಾರಗಳನ್ನು ನಾವು ಸೇವಿಸುತ್ತಾ ಸಾಗಿದಂತೆ, ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಮ್ಮ ಆಹಾರದ ಅಭ್ಯಾಸಗಳು, ಸ್ವಚ್ಛತೆ ಕಾಪಾಡಿಕೊಳ್ಳದಿರುವುದು, ಕೆಲವು ನಿರ್ದಿಷ್ಟ ಔಷಧಿಗಳ ಸೇವನೆ - ಹೀಗೆ ನಾನಾ ಕಾರಣಗಳಿಂದ ಈ ಕಲೆಗಳು ಉಂಟಾಗಬಹುದು.
ಆಹಾರವನ್ನು ಜಗಿಯಲು ಸಹಾಯ ಮಾಡುವ, ನಮ್ಮ ಮುಖದ ಅಂದವನ್ನು ದುಪ್ಪಟ್ಟು ಮಾಡುವ ಹಲ್ಲುಗಳನ್ನು ಸ್ವಚ್ಛ ಪಡಿಸಿಕೊಳ್ಳುವುದು, ವಸಡುಗಳ ಸದೃಢತೆಯನ್ನು ಕಾಪಾಡಿಕೊಳ್ಳುವುದು - ಒಟ್ಟಾರೆಯಾಗಿ ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.
ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಸರಿಯಾದ ಮನೆಮದ್ದುಗಳನ್ನು ಬಳಸಿದರೆ, ನಾವು ಈ ಹಳದಿ ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದು ಮತ್ತು ನಮ್ಮ ಹಲ್ಲುಗಳ ನೈಸರ್ಗಿಕ ಬಿಳಿಯನ್ನು ಮತ್ತೆ ಪಡೆಯಬಹುದು. ಇದು ಹೇಗೆ ಎಂದು ಯೋಚಿಸುತ್ತಿದ್ದೀರಾ. ಹಾಗಾದರೆ, ಇಲ್ಲಿದೆ ನೋಡಿ ಕೆಲವು ಸರಳ ಪರಿಹಾರಗಳು
ಆಯಿಲ್ ಪುಲ್ಲಿಂಗ್
ಆಯಿಲ್ ಪುಲ್ಲಿಂಗ್ ಒಂದು ಪ್ರಾಚೀನ ಆಯುರ್ವೇದ ಅಭ್ಯಾಸವಾಗಿದ್ದು, ಅದರ ಹಲ್ಲಿನ ಆರೋಗ್ಯವನ್ನು ಕಾಪಾಡಲು ಹೆಸರುವಾಸಿಯಾಗಿದೆ.
ಬಳಸುವುದುಹೇಗೆ:
- ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ.
- ಸುಮಾರು 15-20 ನಿಮಿಷಗಳ ಕಾಲ ಅದನ್ನು ನಿಮ್ಮ ಬಾಯಿಗೆ ಅತ್ತಿಂದಿತ್ತ ಆಡಿಸಿ.
- ನಂತರ ಆ ಎಣ್ಣೆಯನ್ನು ಉಗುಳು ಮತ್ತು ಬೆಚ್ಚಗಿನ ನೀರಿನಿಂದ ಬಾಯಿಯನ್ನು ತೊಳೆಯಿರಿ.
- ಎಂದಿನಂತೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ
ಅಡಿಗೆ ಸೋಡಾ
ಅಡಿಗೆ ಸೋಡಾ ಹಲ್ಲುಗಳನ್ನು ಬಿಳುಪುಗೊಳಿಸುವ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಮೇಲ್ಮೈ ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.
ಬಳಸುವುದು ಹೇಗೆ:
- ನಿಂಬೆ ಹುಳಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ
- ತಯಾರಾದ ಪೇಸ್ಟ್ ನಿಂದ ಹಲ್ಲನ್ನು ಉಜ್ಜಿ
- ಐದು ನಿಮಿಷ ಇದನ್ನು ಹಾಗೆ ಬಿಡಿ
- ನಂತರ, ಶುದ್ಧ ನೀರಿನಿಂದ ತೊಳೆಯಿರಿ
ಆಪಲ್ಸೈಡರ್ವಿನೆಗರ್:
ಆಪಲ್ ಸೈಡರ್ ವಿನೆಗರ್ (ACV) ಒಂದು ಬಗೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಎಂದೇ ಹೇಳಬಹುದು. ಇದರಲ್ಲಿರುವ ಆಮ್ಲೀಯ ಅಂಶವು ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಒಟ್ಟಾರೆ ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ.
- ಒಂದು ಚಮಚ ಅಡಿಗೆ ಸೋಡಾವನ್ನು ಎರಡು ಚಮಚ ಹೈಡ್ರೋಜನ್ ಪೆರಾಕ್ಸೈಡ್ನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ, ಹಲ್ಲುಗಳಿಗೆ ಹಚ್ಚಿ, ಎರಡು ನಿಮಿಷಗಳ ಕಾಲ ನಿಧಾನವಾಗಿ ಬ್ರಷ್ ಮಾಡಿ.
- ನಂತರ, ಅದನ್ನು ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ.
- ಹಲ್ಲುಗಳಿಗೆ ಉಂಟಾಗುವ ಹಾನಿಯ್ನನು ತಪ್ಪಿಸಲು ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡಬಹುದು.
ಇದ್ದಿಲು
ಹಿಂದೆಲ್ಲಾ ಹಲ್ಲುಗಳನ್ನು ಸ್ವಚ್ಚಗೊಳಿಸಲು ಇದ್ದಿಲ್ಲನ್ನು ಬಳಸುತ್ತಿದ್ದುದ್ದು ನಮಗೆಲ್ಲಾ ತಿಳಿದಿರುವ ವಿಚಾರವೇ. ಈಗಲೂ ಕೆಲವೆಡೆ, ಇದರ ಬಳಕೆ ರೂಢಿಯಲ್ಲಿದೆ. ಇದು ಹಲ್ಲುಗಳನ್ನು ಬಿಳುಪುಗೊಳಿಸುವ ಜನಪ್ರಿಯ ಆಯ್ಕೆ ಎಂದರೆ ತಪ್ಪಾಗಲಾರದು.
ಬಳಸುವುದು ಹೇಗೆ:
- ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ತೇವಗೊಳಿಸಿ ಮತ್ತು ಪುಡಿಮಾಡಿದ ಇದ್ದಿಲನ್ನು ಅದಕ್ಕೆ ಹಚ್ಚಿಕೊಳ್ಳಿ
- ಎರಡು ನಿಮಿಷಗಳ ಕಾಲ ನಿಮ್ಮ ಹಲ್ಲುಗಳನ್ನು ನಿಧಾನವಾಗಿ ಬ್ರಷ್ ಮಾಡಿ.
- ನಿಮ್ಮ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.
- ಇದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಬಹುದು
ಸ್ಟ್ರಾಬೆರಿ
ಸ್ಟ್ರಾಬೆರಿ ಹಣ್ಣಿನಲ್ಲಿ ಮ್ಯಾಲಿಕ್ ಆಮ್ಲ ಇರುವುದರಿಂದ ಹಲ್ಲುಗಳ ಕಲೆಗಳನ್ನು ತೆಗೆಯಲಯ ಪರಿಣಾಮಕಾರಿ ವಿಧಾನ ಎನ್ನಬಹುದು.
ಬಳಸುವುದುಹೇಗೆ:
- ಬೇಕಿಂಗ್ ಸೋಡಾ ಮತ್ತು ಮಾಗಿದ ಸ್ಟ್ರಾಬೆರಿ ಹಣ್ಣು ತೆಗೆದು ಕೊಂಡು ಕಿವುಚಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ
- ಅದನ್ನು ಹಲ್ಲುಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ
- ಆನಂತರ ಸ್ವಚ್ಚ ನೀರಿನಿಂದ ಬಾಯಿ ತೊಳೆದುಕೊಳ್ಳಿ.
ಹರಳೆಣ್ಣೆಮತ್ತುಉಪ್ಪಿನೊಂದಿಗೆಹಲ್ಲುಜ್ಜುವುದು
ಹರಳೆಣ್ಣೆ (ಫಿಟ್ಕಾರಿ) ಮತ್ತು ಉಪ್ಪು ಹಳದಿ ಕಲೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇದು ಸರಳವೆನಿಸಿದರೂ, ಇವು ನಿಮ್ಮ ಹಲ್ಲುಗಳ ಹೊಳಪನ್ನು ಹೆಚ್ಚಿಸುತ್ತದೆ.
ಇವುಗಳಲ್ಲಿ ಯಾವುದೇ ಸಲಹೆಯನ್ನು ನೀವು ಅನುಸರಿಸಿದರೂ ಹೊಳೆಯುವು, ಫಳಪಳ ಹಲ್ಲುಗಳು ನಿಮ್ಮದಾಗುವುದರಲ್ಲಿ ಅನುಮಾನವಿಲ್ಲ.