ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಕಾಸರಗೋಡು ಶಾಖೆಯ ಆಶ್ರಯದಲ್ಲಿ ವೈದ್ಯರ ದಿನಾಚರಣೆಯನ್ನು ಐಎಂಎ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಐಎಂಎ ಶಾಖೆಯ ಅಧ್ಯಕ್ಷ ಡಾ.ಜಿತೇಂದ್ರ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ಮುಖ್ಯ ಅತಿಥಿಯಾಗಿ ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದರ ಅವರು, ಪ್ರತಿಕೂಲ ಪರಿಸ್ಥಿತಿಯಲ್ಲೂ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯ ಸಮುದಾಯ ಸಮಾಜಕ್ಕೆ ಆದರ್ಶಪ್ರಾಯವಾಗಿದ್ದಾರೆ ಎಂದು ತಿಳಿಸಿದ ಅವರು ಹೆಚ್ಚುತ್ತಿರುವ ಸೈಬರ್ ಹಣಕಾಸು ಅಪರಾಧಿಗಳ ಬಲೆಗೆ ಬೀಳದಂತೆ ವೈದ್ಯರಿಗೆ ಸಲಹೆ ನೀಡಿದರು. ಈ ಸಂದರ್ಭ ಕಾಸರಗೋಡಿನಲ್ಲಿ ಚಿಕಿತ್ಸಾ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಡಾ.ಸುಬ್ರಾಯ ಕಾಮತ್ ಹಾಗೂ ಡಾ.ಸುಬ್ರಾಯ ಭಟ್ ಹಾಗೂ ಕುಟುಂಬ ವೈದ್ಯರಾಗಿ 50 ವರ್ಷ ಉಳ್ಳಾಲದಲ್ಲಿ ಸೇವೆ ಸಲ್ಲಿಸಿದ ಡಾ.ಪಿ. ಕೃಷ್ಣ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅತ್ಯುತ್ತಮ ಪ್ಯಾರಾಮೆಡಿಕಲ್ ವರ್ಕರ್‍ಗೆ ಕ್ಯಾಪ್ಟನ್ ಡಾ.ಕೆ ಎ. ಶೆಟ್ಟಿ ದತ್ತಿ ಪ್ರಶಸ್ತಿಗೆ ಭಾಜನರಾದ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯ ಎಆರ್‍ಟಿ ಸೆಂಟರ್ ಕೌನ್ಸಿಲರ್ ಅನಿಲ್ ಕುಮಾರ್ ಅವರಿಗೆ ಮುಖ್ಯ ಅತಿಥಿ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಎ.ವಿ.ಭರತನ್ ಮತ್ತು ಡಾ.ಬಿ.ಸಿ.ರಾಯ್ ಸಂಸ್ಮರಣಾ ಉಪನ್ಯಾಸ ನೀಡಿದರು. ಬಿ.ಎಸ್.ರಾವ್, ಡಾ.ಕೆ. ಅನಂತ ಕಾಮತ್ ಹಾಗೂ ಜಿಲ್ಲಾ ಸಂಚಾಲಕ ಡಾ.ಬಿ.ನಾರಾಯಣ ನಾಯ್ಕ, ವೈದ್ಯರಾದ ಜನಾರ್ದನ ನಾಯ್ಕ್, ಮಾಯಾ ಮಲ್ಯ, ಶ್ಯಾಮ ಪ್ರಸಾದ್, ಸುರೇಶ್ ಮಲ್ಯ, ಟಿ.ಖಾಸಿಂ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ.ಪ್ರಜ್ಯೋತ್ ಶೆಟ್ಟಿ ವಂದಿಸಿದರು. ಡಾ. ರೇಖಾ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.