HEALTH TIPS

ಕುನೊ ಉದ್ಯಾನವನ: ಪ್ರಕೃತಿ ಮಡಿಲಲ್ಲಿ ಚೀತಾ ಮರಿಗಳ ಚಿನ್ನಾಟ

         ವದೆಹಲಿ: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಗಾಮಿನಿಯೊಂದಿಗೆ ಮರಿಗಳು ಪ್ರಕೃತಿ ಮಡಿಲಲ್ಲಿ ಚಿನ್ನಾಟವಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.


            ದಕ್ಷಿಣ ಆಫ್ರಿಕಾದ ಚೀತಾ ಗಾಮಿನಿ ಇತ್ತೀಚೆಗೆ 5 ಮರಿಗಳಿಗೆ ಜನ್ಮ ನೀಡಿತ್ತು. ತಾಯಿಯೊಂದಿಗೆ ಮರಿಗಳು ಆಟವಾಡುತ್ತಿರುವುದನ್ನು ಅರಣ್ಯ ಸಿಬ್ಬಂದಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು.

          ಕೇಂದ್ರ ಅರಣ್ಯ ಸಚಿವ ಭೂಪಿಂದರ್ ಯಾದವ್ ಕೂಡ ಈ ವಿಡಿಯೊವನ್ನು ಹಂಚಿಕೊಂಡಿದ್ದು ಚೀತಾಗಳಿಗೆ ಚಿರತೆಗಳಿಗೆ 'ಒತ್ತಡ ಮುಕ್ತ ವಾತಾವರಣ' ಖಾತ್ರಿಪಡಿಸಿದ್ದಕ್ಕಾಗಿ ಕುನೊ ಉದ್ಯಾನವನದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅವರು ಶ್ಲಾಘಿಸಿದ್ದಾರೆ.

              ಆಫ್ರಿಕಾದ ಕಲಹರಿ ಅರಣ್ಯ ಪ್ರದೇಶದಿಂದ ಭಾರತಕ್ಕೆ ಗಾಮಿನಿ ಚೀತಾವನ್ನು ತರಲಾಗಿತ್ತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries