ಕಾಸರಗೋಡು: ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಎಕನಾಮಿಕ್ಸ್ ಅಧ್ಯಯನ ವಿಭಾಗ ಹಾಗು ಕೇರಳ ಎಕನಾಮಿಕ್ ಅಸೋಸಿಯೇಶನ್ ಸಂಯುಕ್ತವಾಗಿ ಬೇಸಿಕ್ ಎಕನಾಮಿಕ್ಸ್ ಎಂಬ ವಿಷಯದಲ್ಲಿ ಆಯೋಜಿಸಿದ ಐದು ದಿನಗಳ ಕಾರ್ಯಾಗಾರ ನಡೆಯಿತು.
ಸಬರ್‌ಮತಿ ಸಭಾಂಗಣದಲ್ಲಿ ವೈಸ್ ಚಾನ್ಸಲರ್ ಇನ್ ಚಾರ್ಜ್ ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಉದ್ಘಾಟಿಸಿದರು. ಎಕನಾಮಿಕ್ಸ್ ವಿಭಾಗ ಅಧ್ಯಕ್ಷ ಪ್ರೊ.ಡಿ.ಸ್ವಾಮಿ ಕಣ್ಣನ್ ಅಧ್ಯಕ್ಷ್ಷತೆ ವಹಿಸಿದರು. ಕೇರಳ ಎಕನಾಮಿಕ್ ಅಸೋಸಿಯೇಶನ್ ಕೋಶಾಧಿಕಾರಿ ಡಾ.ಎಸ್.ಕೆ.ಗೋಡ್ವಿನ್, ಉಪಾಧ್ಯಕ್ಷ ಡಾ. ರಜುನ್, ಪ್ರೋಗ್ರಾಂ ಕೋರ್ಡಿನೇಟರ್ ಡಾ. ಶ್ಯಾಂ ಪ್ರಸಾದ್ ಮಾತನಾಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಮಾಜಿ ಪ್ರಾಂಶುಪಾಲ ಹರಿ ಕುರುಪ್, ಕೆ.ಕೆ.ಸೇಶನ್ ಕಾರ್ಯಕ್ರಮ ನಿರ್ವಸಿದರು.