ಕಾಸರಗೋಡು: ಕರ್ನಾಟಕ ಗಮಕ ಕಲಾಪರಿಷತ್ ಬೆಂಗಳೂರು ಮತ್ತು ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕ ಕಾಸರಗೋಡು ವತಿಯಿಂದ ಗಮಕ ಶ್ರಾವಣ ಕಾರ್ಯಕ್ರಮ ಆ. ೬ರಿಂದ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಜರುಗಲಿರುವುದು.
ಆ. ೬ರಂದು ಮಧ್ಯಾಹ್ನ ೩ಕ್ಕೆ ಶ್ರೀ ಎಡನೀರು ಮಠದ ಶ್ರೀಭಾರತೀ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಉದ್ಘಾಟಿಸಿ ಆಶೀರ್ವಚನ ನಿಡುವರು.
ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ವಿ.ಬಿ ಕುಳಮರ್ವ ಪ್ರಸ್ತವಿಕ ಮಾತುಗಳನ್ನಾಡುವರು. ಈ ಸಂದರ್ಭ ತೊರವೆ ರಾಮಾಯಣದಿಂದ ಆಯ್ದ ಭಾಗದಿಂದ ಕಾವ್ಯವಾಚನ ಪ್ರವಚನ ನಡೆಯುವುದು. ಡಾ. ಶಶಿರಾಜ ನೀಲಂಗಳ ವಾಚಿಸುವರು. ಕಲಾಶ್ರೀ ಗಮಕಿ, ತೆಕ್ಕೇಕೆರೆ ಸಉಬ್ರಹ್ಮಣ್ಯ ಭಟ್ ವ್ಯಾಖ್ಯಾನ ನೀಡುವರು.
ಆ. ೯ರಂದು ಸಂಜೆ ೪ಕ್ಕೆ ವಿಟ್ಲ ಮೂರ್ಕಜೆ ಮೈತ್ರೇಯಿ ಗುರುಕುಲ, ೧೯ರಂದು ಸಂಜೆ ೪ಕ್ಕೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ, ೨೧ರಂದು ಮಧ್ಯಾಹ್ನ ೩ಕ್ಕೆ ಪೈವಳಿಕೆ ಸುಬ್ಬಯ್ಯಕಟ್ಟೆ ತರಂಗಿಣಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವಠಾರದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ ನಡೆಯುವುದು.
ಸೆ. ೪ರಂದು ಮಧ್ಯಾಹ್ನ ೨.೩೦ಕ್ಕೆ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದಾಶ್ರಮದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸುವರು. ನಿವೃತ್ತ ಮುಖ್ಯ ಶಿಕ್ಷಕ ಕಮಲಾಕ್ಷ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸುವರು. ತೆಕ್ಕೇಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು.