ಕಾಸರಗೋಡು : ನಗರದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಆಗಸ್ಟ್ 21 ರಂದು ಜರಗಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ 353ನೇ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದ ತಂತ್ರಿವರ್ಯರು ಹಾಗೂ ಮುಕ್ತೇಸರರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರು ರವೀಶ ತಂತ್ರಿ ಕುಂಟಾರು ಅವರಿಗೆ ಪ್ರಥಮ ಪ್ರತಿಯನ್ನು ನೀಡಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಕ್ಷೇತ್ರ ಸಮಿತಿ ಪ್ರಮುಖರಾದ ಕೆ.ಎನ್. ವೆಂಕಟ್ರಮಣ ಹೊಳ್ಳ, ಕೆ.ಎನ್. ರಾಮಕೃಷ್ಣ ಹೊಳ್ಳ, ಕೆ.ವಿ.ಶ್ರೀನಿವಾಸ ಹೊಳ್ಳ, ರಾಮ್ ಪ್ರಸಾದ್, ನಗರ ಸಭಾ ಸದಸ್ಯೆ ಶ್ರೀಲತಾ ಟೀಚರ್, ಪ್ರದೀಪ್ ಬೇಕಲ್, ಗುರುಪ್ರಸಾದ್ ಕೋಟೆಕಣಿ, ಕಿಶೋರ್ ಕುಮಾರ್, ಮೀರಾ ಕಾಮತ್, ಕೃಷ್ಣ ಮನ್ನಿಪ್ಪಾಡಿ, ಶ್ರೀಕಾಂತ್ ಕಾಸರಗೋಡು, ಅರುಣ ಕುಮಾರಿ, ಸವಿತಾ, ಪ್ರೇಮಾ ಶೆಟ್ಟಿ ಉಪಸ್ಥಿತರಿದ್ದರು.