ಕುಂಬಳೆ: ಕುಂಬಳೆಯ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ವತಿಯಿಂದ ಯಕ್ಷಗಾನ ರಂಗದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರಿಗೆ ನುಡಿನಮನ ಕಾರ್ಯಕ್ರಮ ಜುಲೈ 14ರಂದು ಮಧ್ಯಾಹ್ನ 2ರಿಂದ ಕುಂಬಳೆ ಶೇಡಿಕಾವಿನಲ್ಲಿರುವ ಸಂಘದ ಸಭಾಂಗಣದಲ್ಲಿ ಜರುಗಲಿದೆ.
ನಾರಾಯಣ ಅಡಿಗ ಶೇಡಿಕಾವು ಹಾಗೂ ವೇದಮೂರ್ತಿ ಹರಿನಾರಾಯಣ ಮಯ್ಯ ದೀಪೋಜ್ವಲನಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಪಕಳಕುಂಜ ಶ್ಯಾಮಭಟ್, ನಾ.ಕಾರಂತ ಪೆರಾಜೆ, ದಿವಾಣ ಶಿವಶಂಕರ ಭಟ್, ಪತ್ರಕರ್ತ ಎಂ.ನಾ ಚಂಬಲ್ತಿಮಾರ್, ಕುಂಬಳೆ ಗೋಪಾಲ ಬೆಂಗಳೂರು, ಪಾರ್ತಿಸುಬ್ಬ ಯಕ್ಗಾನ ಸಂಘದ ಅಧ್ಯಕ್ಷ ಅಶೋಕ ಕೆ ನುಡಿನಮನ ಸಲ್ಲಿಸುವರು.
ಕಾರ್ಯಕ್ರಮದ ಅಂಗವಾಗಿ ಅತಿಥಿ ಕಲಾವಿದರು ಹಾಗೂ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ಸದಸ್ಯರ ಕೂಡುವಿಕೆಯಿಂದ'ಮೋಕ್ಷ ಸಂಗ್ರಾಮ'ಯಕ್ಷಗಾನ ತಾಳಮದ್ದಳೆ ನಡೆಯುವುದು.