ಕಾಸರಗೋಡು : ಜಿಲ್ಲೆಯಲ್ಲಿ ಬಿರುಸಿನ ಮಳೆ ಹಿನ್ನೆಲೆಯಲ್ಲಿ ಉಪ್ಪಳ ಮತ್ತು ಶಿರಿಯಾ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ದಾಟಿದೆ. ಚಂದ್ರಗಿರಿ, ಮೊಗ್ರಾಲ್, ಕಾಯರ್ಂಗೋಡ್ ಮತ್ತು ನೀಲೇಶ್ವರ ನದಿಗಳಲ್ಲಿ ನೀರಿನ ಮಟ್ಟ ಭಾರೀ ಏರಿಕೆಯುಂಟಾಗಿದ್ದು, ತಗ್ಗು ಪ್ರದೇಶದ ಜನತೆ ಆತಂಕದಿಂದ ಕಾಲ ಕಳೆಯುವಂತಾಗಿದೆ.
ಕಳೆದ 24 ಗಂಟೆಗಳಲ್ಲಿ 80.733 ಮಿ.ಮೀ ಮಳೆಯಾಗಿದೆ. ಶುಕ್ರವಾರ ಮಂಜೇಶ್ವರದಲ್ಲಿ 42, ಉಪ್ಪಳ 56.3, ಪೈಕ 65, ಮಧೂರು 66, ವಿದ್ಯಾನಗರ 55.4, ಪಡಿಯತ್ತಡ್ಕ 81.4, ಕಲ್ಯೋಟ್ 114.8, ಶೇಣಿ 86.4, ಎರಿಕುಳಂ 86.4, ಚಿಮೇನಿ 79.6, ವೆಲ್ಲಚ್ಚಾಲ್‍ನಲ್ಲಿ 12.6 ಮಿ.ಮೀ ಮಳೆ ಸುರಿದಿದೆ. ಮಳೆಯ ಅಬ್ಬರಕ್ಕೆ ಈವರೆಗೆ 164 ಮನೆಗಳು ಸಂಪೂರ್ಣ ಹಾಗೂ 10 ಮನೆಗಳು ಭಾಗಶಃ ಕುಸಿದಿದೆ. ಎರಡು ಮನೆಗಳ ಆವರಣಗೋಡೆ ಕುಸಿದು ಬಿದ್ದಿದೆ.