ಕಾಸರಗೋಡು : ಕೋಯಿಕ್ಕೋಡಿನ ವಿ.ಕೆ.ಮೆನನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 26ನೇ ರಾಜ್ಯ ಜೂನಿಯರ್ ಟೇಕ್ವಾಂಡೋ ಚಾಂಪಿಯನ್‍ಶಿಪ್ ನಲ್ಲಿ ಕಾಸರಗೋಡಿನ ಯೋಧಾ ಟೇಕ್ವಾಂಡೋ ಅಕಾಡೆಮಿ ಪ್ರಶಸ್ತಿ ಗೆದ್ದುಕೊಂಡಿದೆ. 2 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಪದಕಗಳನ್ನು ಗೆದ್ದು ತಂಡ ಕಾಸರಗೋಡು ಜಿಲ್ಲೆಗೆ ಸಮಗ್ರ ಚಾಂಪಿಯನ್ ಶಿಪ್ ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಆಗಸ್ಟ್ 17 ರಿಂದ 21 ರವರೆಗೆ ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲಿ 52 ಕೆಜಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಕೆ.ಅನುಷಾ ಮತ್ತು 63 ಕೆಜಿ ವಿಭಾಗದಲ್ಲಿ ಎ.ಎಂ.ಫಾತಿಮಾ ಜೂನಿಯರ್ ಟೇಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಚೈತ್ರಲಕ್ಷ್ಮಿ ಸಿ, ಅದ್ವೈತ್ ದಿನು, ಅಭಿನವ್ ಟಿ ಮತ್ತು ಶ್ರೀನಿಧಿ ಎಂ ಬೆಳ್ಳಿ ಪದಕ ಪಡೆದರೆ, ಹರಿಕೃಷ್ಣ ಆರ್, ಹನಿ ಎಂ.ಎ ಮತ್ತು ಮಂಜಿಮಾ ಮಣಿಕಂಠನ್ ಕಂಚಿನ ಪದಕ ಪಡೆದರು. ಯೋದ್ಧ ಟೆಕ್ವಾಂಡೋ ಅಕಾಡೆಮಿ ಮಾಸ್ಟರ್ ಜಯನ್ ಪೆÇಯಿನಾಚಿ, ಪ್ರಿಯೇಶ್ ಆರ್, ಸುಜಿತ್ ಕೆ, ಮನೋಜ್ ಕುಮಾರ್ ಕೆ ಮತ್ತು ಶರಣ್ಯ ಕೆ. ತರಬೇತಿ ನೀಡಿದ್ದಾರೆ.