ಕಲ್ಪಟ್ಟ: ಮೆಪ್ಪಾಡಿ ಮುಂಡಕೈಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಮೃತರ ಸಂಖ್ಯೆ ೬೭ಕ್ಕೆ (ಇಂದು ಸಂಜೆ ೪.೧೫ರ ವರದಿಯಂತೆ) ಏರಿಕೆಯಾಗಿದೆ. ಈ ಅಂಕಿ ಅಂಶವು ನಿಲಂಬೂರ್ ಪೋತುಕಲ್ ಪ್ರದೇಶದ ನದಿಯಲ್ಲಿನ ವಿವಿಧ ಸ್ಥಳಗಳಿಂದ ಪತ್ತೆಯಾದ ಅನೇಕ ಜನರ ಮೃತ ದೇಹಗಳನ್ನು ಒಳಗೊಂಡಿದೆ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ೧೦ ಮಂದಿಯ ಮೃತದೇಹಗಳನ್ನು ಗುರುತಿಸಲಾಗಿದೆ.
ಮೃತದೇಹಗಳನ್ನು ರಮ್ಲತ್ (೫೩), ಅಶ್ರಫ್ (೪೯), ಕುಂಞಮೀನ್ (೬೫), ಲೆನಿನ್, ವಿಜೀಶ್ (೩೭), ಸುಮೇಶ್ (೩೫), ಸಲಾಂ (೩೯), ಶ್ರೇಯಾ (೧೯), ಪ್ರೇಮಲೀಲಾ ಮತ್ತು ರೆಜಿನಾ ಎಂದು ಗುರುತಿಸಲಾಗಿದೆ. ೧೮ ಮಂದಿಯ ಮೃತದೇಹಗಳನ್ನು ಮೆಪ್ಪಾಡಿ ಆಸ್ಪತ್ರೆಯಲ್ಲಿ ಹಾಗೂ ಐವರ ಮೃತದೇಹಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಸುಮಾರು ೭೦ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಾಗಿ ಎಜಿಮಲದಿಂದ ನೌಕಾಪಡೆ ತಂಡ ಆಗಮಿಸಲಿದೆ. ಪ್ರಸ್ತುತ, ಎನ್‌ಡಿಆರ್‌ಎಫ್ ತಂಡಗಳು ನದಿಗೆ ಅಡ್ಡಲಾಗಿ ಹಗ್ಗ ಹಾಕಿ ಮುಂಡಕ್ಕೆöÊ ದಡಕ್ಕೆ ದಾಟಲು ಪ್ರಯತ್ನಿಸುತ್ತಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯ ಇಂಜಿನಿಯರಿAಗ್ ಗುಂಪು ವಯನಾಡ್ ತಲುಪಿದೆ. ಭೂಕುಸಿತ ಸಂಭವಿಸಿದರೆ ಸೇನೆಯ ಎಂಜಿನಿಯರಿAಗ್ ವಿಭಾಗ ಪರ್ಯಾಯ ವ್ಯವಸ್ಥೆ ಜಾರಿಗೊಳಿಸಲಿದೆ.
ಏತನ್ಮಧ್ಯೆ, ರಕ್ಷಣಾ ಕಾರ್ಯಾಚರಣೆಗಾಗಿ ಏರ್ ಲಿಫ್ಟಿಂಗ್ ಸಾಧ್ಯತೆಯನ್ನು ಪರಿಶೀಲಿಸಲು ಬಂದ ಎರಡು ಹೆಲಿಕಾಪ್ಟರ್‌ಗಳು ಇಳಿಯಲು ಸಾಧ್ಯವಾಗದೆ ವಯನಾಡಿಗೆ ಮರಳಿದವು. ಹೆಲಿಕಾಪ್ಟರ್‌ಗಳು ಕೋಝಿಕ್ಕೋಡ್‌ಗೆ ಹಿಂತಿರುಗುತ್ತಿದ್ದAತೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿತು. ಮುಂಡಕೈಯಲ್ಲಿ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ೧೯೦ ಮಂದಿಯ ಸೇನಾ ತಂಡ ವಯನಾಡಿಗೆ ತೆರಳಿದೆ. ಟೆರಿಟೋರಿಯಲ್ ಆರ್ಮಿ ಕೋಝಿಕ್ಕೋಡ್ ೧೨೨ ಬೆಟಾಲಿಯನ್‌ನ ಕಂಪನಿಯು ಶೀಘ್ರದಲ್ಲೇ ಹೊರಡಲಿದೆ. ೫೦ ಜನರ ತಂಡ ಬರಲಿದೆ.