ನವದೆಹಲಿ: ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿರುವುದು ತಿಳಿದು ತೀವ್ರ ನೋವಾಗಿದೆ. ಭಯೋತ್ಪಾದನೆ ನಿರ್ಮೂಲನೆಗೆ ಭದ್ರತಾ ಪಡೆಗಳು ಬದ್ಧವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದರು.
ನವದೆಹಲಿ: ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿರುವುದು ತಿಳಿದು ತೀವ್ರ ನೋವಾಗಿದೆ. ಭಯೋತ್ಪಾದನೆ ನಿರ್ಮೂಲನೆಗೆ ಭದ್ರತಾ ಪಡೆಗಳು ಬದ್ಧವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದರು.
ಸೇನಾ ಸಿಬ್ಬಂದಿ ಮುಖ್ಯಸ್ಥ ಜ.ಉಪೇಂದ್ರ ದ್ವಿವೇದಿ ಅವರು, ಉಗ್ರ ವಿರೋಧಿ ಕಾರ್ಯಾಚರಣೆ ಕುರಿತು ಸಿಂಗ್ ಅವರಿಗೆ ಸಂಕ್ಷಿಪ್ತವಾಗಿ ವಿವರಿಸಿದರು.
'ಉಗ್ರ ವಿರೋಧ ಕಾರ್ಯಾಚರಣೆಗಳು ನಡೆಯುತ್ತಲೇ ಇವೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಮತ್ತು ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಸ್ಥಾಪಿಸಲು ನಮ್ಮ ಯೋಧರು ಬದ್ಧರಾಗಿದ್ದಾರೆ' ಎಂದು ಹೇಳಿದರು.
ಪಾಕ್ ಉತ್ತೇಜಿತ ಭಯೋತ್ಪಾದನೆಗೆ ಪ್ರತ್ಯುತ್ತರ: ಅಸ್ಸಾಂ ಸಿ.ಎಂ
ಪಾಕಿಸ್ತಾನ ಉತ್ತೇಜಿತ ಭಯೋತ್ಪಾದನೆಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಮಂಗಳವಾರ ಹೇಳಿದರು. ಜಾರ್ಖಂಡ್ ಪ್ರವಾಸದಲ್ಲಿರುವ ಅವರು 'ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಪುನಃಸ್ಥಾಪನೆಯಾಗಲಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಾದ್ದು ನಮ್ಮ ಜವಾಬ್ದಾರಿ. ಪಾಕಿಸ್ತಾನದ ಪ್ರತಿಯೊಂದು ಪಿತೂರಿಗೂ ಉತ್ತರ ನೀಡುತ್ತೇವೆ' ಎಂದು ಹೇಳಿದರು.