ಮಂಜೇಶ್ವರ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಕಾಸರಗೋಡು ಜಿಲ್ಲೆ, ಶ್ರೀ ಮಹಾಲಿಂಗೇಶ್ವರ ಶಾಖೆ ಕುಂಜತ್ತೂರು ಇದರ ವತಿಯಿಂದ ಗುರು ಪೂರ್ಣಿಮಾ ಅಂಗವಾಗಿ ಭಾರತ್ ಮಾತಾ ಪೂಜನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ಸಂಚಾಲ ಹೇಮಂತ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಸರಗೋಡು ತಾಲೂಕು ವರದಿ ಪ್ರಮುಖರಾದ ಸುಜಾತಾ ಹಿತನುಡಿಗಳನ್ನು ಆಡಿದರು. ಕುಂಜತ್ತೂರು ಯೋಗ ಶಿಕ್ಷಕರಾದ ಶೈಲೇಶ್ ಉಪಸ್ಥಿತರಿದ್ದರು. ಯೋಗದ ಅನುಭವ ಬಗ್ಗೆ ವಿಶ್ವನಾಥ ಶೆಟ್ಟಿ ಕುಂಜತ್ತೂರು ಜನಾರ್ದನ ಕುಂಜತ್ತೂರು, ಗಣೇಶ್ ಪಾವೂರು ಮೊದಲಾದವರು ಅನುಭವ ಹಂಚಿಕೊAಡರು. ಅನುರಾಧಾ ವರದಿ ಮಂಡಿಸಿದರು. ರಂಜನಿ ಕುಂಜತ್ತೂರು ಸ್ವಾಗತಿಸಿ, ಅಶ್ವಿತಾ ಹೇಮಂತ್ ವಂದಿಸಿದರು. ಸುಪ್ರಿತಾ ಕುಂಜತ್ತೂರು ನಿರ್ವಹಿಸಿದರು.