ಮಾನಂದವಾಡಿ: ವಯನಾಡಿನ ಬಾಣಾಸುರ ಸಾಗರ ಅಣೆಕಟ್ಟಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಿನ್ನೆ ಸಂಜೆ ವೇಳೆಗೆ ನೀರಿನ ಮಟ್ಟ ೭೭೨.೫೦ ಮೀಟರ್ ಆಗಿರುವುದರಿಂದ ಅಲರ್ಟ್ ನೀಡಲಾಯಿತು.
ಅಣೆಕಟ್ಟೆಯಿಂದೆ ಹೆಚ್ಚುವರಿ ನೀರು ಬಿಡುವ ಭಾಗವಾಗಿ ಇದು ಎರಡನೇ ಹಂತದ ಎಚ್ಚರಿಕೆ. ನೀರಿನ ಮಟ್ಟ ೭೭೩.೫೦ ಮೀಟರ್ ತಲುಪಿದಾಗ ಶೆಟರ್ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಅಣೆಕಟ್ಟೆಯ ಆಸುಪಾಸಿನಲ್ಲಿರುವವರು ಎಚ್ಚರಿಕೆ ವಹಿಸಬೇಕು. ತಗ್ಗು ಪ್ರದೇಶದಲ್ಲಿ ವಾಸಿಸುವ ಜನರನ್ನು ತುರ್ತು ಪರಿಸ್ಥಿತಿಯಲ್ಲಿ ಸ್ಥಳಾಂತರಿಸಲು ಮಧ್ಯಸ್ಥಿಕೆ ವಹಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.