ಕೊಚ್ಚಿ: ಕರುವನ್ನೂರು ಕಪ್ಪುಹಣ ಪ್ರಕರಣದ ಎರಡನೇ ಹಂತದ ತನಿಖೆಯ ನೇತೃತ್ವ ವಹಿಸಿದ್ದ ಉಪನಿರ್ದೇಶಕ ಪ್ರಶಾಂತ್ ಕುಮಾರ್ ಅವರನ್ನು ದೆಹಲಿಯ ಇಡಿ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿದೆ.
ಈ ಹಿಂದೆ ರಾಜತಾಂತ್ರಿಕ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸಿದ್ದ ಪಿ. ರಾಧಾಕೃಷ್ಣನ್ ಅವರು ಇನ್ನು ಕರುವನ್ನೂರ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
ಕೊಚ್ಚಿ ವಲಯ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಉಪ ನಿರ್ದೇಶಕರಾಗಿ ಬಡ್ತಿ ಪಡೆದ ನಂತರ ರಾಧಾಕೃಷ್ಣನ್ ಅವರನ್ನು ಇಡಿ ಚೆನ್ನೈ ಕಚೇರಿಗೆ ವರ್ಗಾಯಿಸಿತ್ತು. ಆಗಸ್ಟ್ ೨೦೨೨ ರಲ್ಲಿ ಚೆನ್ನೈಗೆ ಸ್ಥಳಾಂತರಗೊAಡಿದ್ದರು. ಉಪನಿರ್ದೇಶಕ ಪಿ. ರಾಧಾಕೃಷ್ಣನ್ ಚೆನ್ನೈನಿಂದ ಕೊಚ್ಚಿಗೆ ಶಿಫ್ಟ್ ಆಗಲಿದ್ದಾರೆ.
ಪ್ರಶಾಂತ್ ಕುಮಾರ್ ನೇತೃತ್ವದ ಇಡಿ ತಂಡ ಮೊದಲ ಹಂತದ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಿದೆ. ಕರುವನ್ನೂರಲ್ಲದೆ ಮಾಜಿ ಹಣಕಾಸು ಸಚಿವ ಡಾ. ಥಾಮಸ್ ಐಸಾಕ್, ಹೈರಿಚ್ ಮತ್ತು ಪಾಪ್ಯುಲರ್ ಫೈನಾನ್ಸ್ ಹಣಕಾಸು ವಂಚನೆಗಳ ವಿರುದ್ಧ ತನಿಖೆ ನಡೆಸುತ್ತಿರುವ ಕಿಫ್ಬಿ ಪ್ರಕರಣದ ತನಿಖೆಯನ್ನೂ ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.