ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿಯೂ ಆಗಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಸಲ್ಲಿಸಿರುವ ವಿಚ್ಚೇದನ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ. 15 ವರ್ಷಗಳಿಂದ ಪತ್ನಿಯಿಂದ ದೂರ ಇದ್ದು, ವಿವಾಹ ಅಂತ್ಯವಾಗಿದೆ.

ನ್ಯಾಯಮೂರ್ತಿಗಳಾದ ಸುದಾಂಶು ಧುಲಿಯಾ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಅರ್ಜಿಯ ವಿಚಾರಣೆಗೆ ಒಪ್ಪಿತು. ಓಮರ್ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು.
'ನನ್ನ ಕಕ್ಷಿದಾರರು ಹಾಗೂ ಅವರ ಪತ್ನಿ ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ವಿವಾಹ ಅಂತ್ಯವಾಗಿದೆ. ಹೀಗಾಗಿ ಸಂವಿಧಾನದ ಪರಿಚ್ಛೇದ 142ರ ಅನ್ವಯ ವಿವಾಹವನ್ನು ಕೊನೆಯಾಗಿಸಬೇಕು' ಎಂದು ಸಿಬಲ್ ವಾದ ಮಂಡಿಸಿದ್ದರು.
ಓಮರ್ ಹಾಗೂ ಪಾಯಲ್ 1994ರ ಸೆಪ್ಟೆಂಬರ್ 1ರಂದು ವಿವಾಹವಾಗಿದ್ದರು. 2009ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಕ್ರೌರ್ಯದ ಆಧಾರದಲ್ಲಿ ತಮಗೆ ವಿಚ್ಛೇದನ ನೀಡಬೇಕು ಎಂದು ಈ ಹಿಂದೆ ದೆಹಲಿ ಹೈಕೋರ್ಟ್‌ನಲ್ಲಿ ಓಮರ್ ಅಬ್ದುಲ್ಲಾ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿತ್ತು.