ಕುಂಬಳೆ: ಎರಡೂ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತ ಅಬ್ದುಲ್ಲ ಕುಂಬಳೆ ಅವರ ಕಿಡ್ನಿ ಕಸಿ ಚಿಕಿತ್ಸೆಗಾಗಿ ಕೇರಳ ಪತ್ರಕರ್ತರ ಸಂಘ(ಕೆ.ಜೆ.ಯು-ಕೇರಳ ಜರ್ನಲಿಸ್ಟ್ ಯೂನಿಯನ್) ರಾಜ್ಯ ಸಮಿತಿ ಸಂಗ್ರಹಿಸಿದ ಎರಡು ಲಕ್ಷ ರೂ.ಗಳನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಸ್ಮಿಜನ್ ಅವರು ಭಾನುವಾರ ಅಬ್ದುಲ್ಲಾ ಅವರಿಗೆ ಹಸ್ತಾಂತರಿಸಿದರು.
ಕೆಜೆಯು ರಾಜ್ಯ ಸಮಿತಿಯು ಪ್ರತಿ ಜಿಲ್ಲೆಯ ಸದಸ್ಯರಿಂದ ಆಯಾ ಜಿಲ್ಲಾ ಸಮಿತಿಗಳ ಮೂಲಕ ಹಣವನ್ನು ಸಂಗ್ರಹಿಸಿತ್ತು. ಮುಖಂಡರು ಅಬ್ದುಲ್ಲ ಅವರ ಮನೆಗೆ ತೆರಳಿ ಹಣ ಹಸ್ತಾಂತರಿಸಿದರು.
ಕೆಜೆಯು ರಾಜ್ಯ ಕೋಶಾಧಿಕಾರಿ ಇ.ಪಿ.ರಾಜೀವ್, ಉಪಾಧ್ಯಕ್ಷ ಪ್ರಕಾಶನ್ ಪಯ್ಯನ್ನೂರು, ಕಾರ್ಯದರ್ಶಿ ಪ್ರಮೋದ್ ಕುಮಾರ್, ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕೂಕ್ಕಲ್, ಕಾರ್ಯದರ್ಶಿ ಧನರಾಜ್ ಉಪ್ಪಳ, ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಸಾಜು ಚೆಂಪೇರಿ, ಉಪಾಧ್ಯಕ್ಷ ಪ್ರಿನ್ಸ್ ಥಾಮಸ್, ಕುಂಬಳೆ ಪ್ರೆಸ್ ಪೋರಂ ಕಾರ್ಯದರ್ಶಿ ಐ.ಮುಹಮ್ಮದ್ ರಫೀಕ್, ಕೋಶಾಧಿಕಾರಿ ಅಬ್ದುಲ್ ಲತೀಫ್ ಕುಂಬಳೆ, ಮಾಜಿ ಅಧ್ಯಕ್ಷ ಕೆ.ಎಂ.ಎ.ಸತ್ತಾರ್ ಉಪಸ್ಥಿತರಿದ್ದರು.